Ashwaveega News 24×7 ಏಪ್ರಿಲ್ 19 – 2026 : ಬೆಂಗಳೂರು : ಯೋಗೇಶ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ Vinay Kulkarni ಅವರ ಶಾಸಕತ್ವ ಇನ್ನೂ ಅಧಿಕೃತವಾಗಿ ರದ್ದಾಗಿಲ್ಲ.
ಶಿಕ್ಷೆ ಪ್ರಕಟವಾದ ಆದೇಶದ ಪ್ರತಿಯು ಸಚಿವಾಲಯಕ್ಕೆ ಇನ್ನೂ ತಲುಪದ ಹಿನ್ನೆಲೆಯಲ್ಲಿ, ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಅಧಿಕೃತ ಆದೇಶದ ಪ್ರತಿ ಸಚಿವಾಲಯಕ್ಕೆ ತಲುಪಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆ ವೇಳೆ ನೇರವಾಗಿ ಅನರ್ಹತೆ ಘೋಷಣೆ ಮಾಡುವ ಬದಲು, ವಿಧಾನಸಭೆಯ 224 ಸ್ಥಾನಗಳಲ್ಲಿ ಒಂದು ಸ್ಥಾನ ಖಾಲಿ ಎಂದು ಸುತ್ತೋಲೆ ಹೊರಡಿಸುವ ಸಾಧ್ಯತೆ ಇದೆ.
ಸಚಿವಾಲಯವು “ಒಂದು ಶಾಸಕ ಸ್ಥಾನ ಖಾಲಿ” ಎಂಬಂತೆ ಅಧಿಕೃತ ಪ್ರಕಟಣೆ ನೀಡಲಿದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ, ನ್ಯಾಯಾಲಯದಿಂದ ಆದೇಶಕ್ಕೆ ತಡೆ ಬಂದಲ್ಲಿ, ಸಚಿವಾಲಯ ಹೊರಡಿಸುವ ಸುತ್ತೋಲೆ ಹಿಂತೆಗೆದುಕೊಳ್ಳುವ ಸಾಧ್ಯತೆಯೂ ಇದೆ.
