Ashwaveega News 24×7 ಏಪ್ರಿಲ್ 19 – 2026 : ಬೆಂಗಳೂರು : ಕೋಳಿ ಮಾಂಸ ಪ್ರಿಯರಿಗೆ ಎಚ್ಚರಿಕೆಯ ಸುದ್ದಿ ಹೊರಬಿದ್ದಿದೆ. ಕೇರಳದ ಬಳಿಕ ಇದೀಗ ಕರ್ನಾಟಕದಲ್ಲೂ ಹಕ್ಕಿಜ್ವರ ಪ್ರಕರಣ ಪತ್ತೆಯಾಗಿದ್ದು, H5N1 avian influenza ವೈರಸ್ ರಾಜ್ಯಕ್ಕೆ ಕಾಲಿಟ್ಟಿದೆ .
ಬೆಂಗಳೂರಿನ Hesaraghatta ಸಮೀಪದ ಮುತ್ಕೂರು ಪ್ರದೇಶದಲ್ಲಿರುವ ರಾಜ್ಯ ಸರ್ಕಾರದ ಪೌಲ್ಟ್ರಿ ಫಾರಂನಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಕೇಂದ್ರದ ಅನುಮತಿ ಮೇರೆಗೆ ನಡೆಸಿದ ತಪಾಸಣೆಯ ಮೊದಲ ಹಂತದಲ್ಲೇ ಕೋಳಿಗಳಲ್ಲಿ H5N1 ಸೋಂಕು ಪತ್ತೆಯಾಗಿದೆ .
ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಸೋಂಕಿತ ಕೋಳಿಗಳನ್ನು ಗುಂಡಿ ತೆಗೆದು ಹೂತು ನಾಶಪಡಿಸಿದೆ . ಪೌಲ್ಟ್ರಿ ಫಾರಂನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಕೋಳಿ ಸಾಕಾಣೆಗಾರರನ್ನು ಕ್ವಾರಂಟೈನ್ ಮಾಡಲಾಗಿದೆ .
ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪಂಚಾಯಿತಿಗಳಿಗೆ ನೋಟಿಸ್ ನೀಡಿದ್ದು, ಮುತ್ಕೂರು ಸುತ್ತಲಿನ 10 ಕಿಲೋಮೀಟರ್ ವ್ಯಾಪ್ತಿಯನ್ನು ಹೈ ಅಲರ್ಟ್ ವಲಯವಾಗಿ ಘೋಷಿಸಲಾಗಿದೆ. ಜೊತೆಗೆ, ಈ ಪ್ರದೇಶವನ್ನು ಒಂದು ವರ್ಷದವರೆಗೆ ನಿಷೇಧಿತ ವಲಯವೆಂದು ಘೋಷಿಸಲಾಗಿದೆ.
ಸಮೀಪದ ಕೋಳಿ ಅಂಗಡಿಗಳಲ್ಲೂ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಆದರೆ, ಇದುವರೆಗೆ ಮನುಷ್ಯರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಕೋಳಿ ಮಾಂಸ ಬಳಕೆ ಮಾಡುವವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
