
bbk12 bigg boss kannada 12 list goes viral
ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಸ್ವಲ್ಪ ತಿಂಗಳುಗಳಲ್ಲಿ ಪ್ರಸಾರ ಕಾಣಲಿದ್ದು ಸುದೀಪ್ ನಿರೂಪಣೆ ಮಾಡ್ತಾರೋ ಇಲ್ಲವೋ ಅನ್ನುವಂತಹ ಒಂದಷ್ಟು ಗೊಂದಲಗಳಿಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಕ್ಕಿದ್ದು ಪ್ರೇಸ್ಮೀಟ್ ಗೆ ಕಿಚ್ಚ ಸುದೀಪ್ ಕೂಡ ಹಾಜರಾಗಿ ತಾನೇ ಬಿಗ್ ಬಾಸ್ 12 ಅನ್ನು ನಡೆಸಿಕೊಡೊದಾಗಿ ಸ್ಪಷ್ಟನೆಯನ್ನು ನಿಡಿದ್ದಾರೆ. ಇದರಿಂದ ಬಿಗ್ ಬಾಸ್ ಫ್ಯಾನ್ಸ್, ಕಿಚ್ಚ ಪ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಇನ್ನೊಂದು ಕಡೆ ಈ ಬಾರಿ ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಬಹುದು ಅನ್ನೊ ಕುತೂಹಲ ಕೂಡಾ ಹೆಚ್ಚಾಗ್ತಿದೆ. ಸದ್ಯ ಮಾಹಿತಿಗಳ ಪ್ರಕಾರ. . ಗಿಲ್ಲಿ ನಟ ʼಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೆ ಬರಬೇಕು ಎಂಬುದು ವೀಕ್ಷಕರ ಇಚ್ಛೆ.
ಇನ್ನು ‘ಸರಿಗಮಪ’ ಕಾರ್ಯಕ್ರಮದಲ್ಲಿ ಸಖತ್ ಟ್ರೆಂಡ್ ಕ್ರಿಯೆಟ್ ಮಾಡಿರುವ ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ, ‘ಮಹಾನಟಿ’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋಗಳ ಮೂಲಕ ಸೌಂಡ್ ಮಾಡಿರುವ ಚಿತ್ರದುರ್ಗದ ಗಗನಾ, ಕಲರ್ಸ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋ ಮೂಲಕ ಜನಪ್ರಿಯತೆ ಪಡೆದಿದ್ದ ಗಾಯಾಕಿ ಅಖಿಲಾ ಪಜಿಮಣ್ಣು, ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ಹಾಗೂ ‘ಮಜಾ ಟಾಕೀಸ್’ನಲ್ಲಿ ಮನರಂಜನೆ ನೀಡಿದ ರಾಘವೇಂದ್ರ, ಸರ್ಕಾರಿ ಕೆಲಸ ಬಿಟ್ಟು ‘ಗಿಚ್ಚಿ ಗಿಲಿಗಿಲಿ’ ಶೋಗೆ ಬಂದಿದ್ದ ಕುಂದಾಪುರದ ದೀಕ್ಷಾ , ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ತುತ್ತಾಗಿ ಸಿಕ್ಕಾಪಟ್ಟೆ ಫೇಮಸ್ ಆದ ಕಿಪಿ ಕೀರ್ತಿ.

‘ಕಾಮಿಡಿ ಕಿಲಾಡಿಗಳು ಸೀಸನ್ 1’ ವಿನ್ನರ್, ನಟ ಶಿವರಾಜ್ ಕೆ ಆರ್ ಪೇಟೆ, ‘ಗೀತಾ’ ಸೀರಿಯಲ್ನಲ್ಲಿ ವಿಲನ್ ಭಾನುಮತಿ ಆಗಿ ನಟಿಸುತ್ತಿದ್ದ ಶರ್ಮಿತಾ ಗೌಡ , ಕಲರ್ಸ್ ಕನ್ನಡ ವಾಹಿನಿಯ ಕಲಾವಿದ ಚಂದ್ರಪ್ರಭ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್, ‘ವಧು’ ಸೀರಿಯಲ್ನಲ್ಲಿ ವಿಲನ್ ಆಗಿ ನಟಿಸಿದ ಸೋನಿ ಮುಲೇವಾ, ನಿರೂಪಕಿಯಾಗಿ ಮಿಂಚುತ್ತಿರುವ ನಟಿ ಜಾಹ್ನವಿ, ಇತ್ತಿಚೇಗೆ ವಿವಾದದ ಕೇಂದ್ರಬಿಂದು ಆಗಿದ್ದ ಮಡೆನೂರು ಮನು, ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ನ ಸಂಜನಾ ಬುರ್ಲಿ.
ನಟಿ ರಶ್ಮಿಕಾ ಮಂದಣ್ಣ ಅವರ ಬೆಸ್ಟ್ ಫ್ರೆಂಡ್ ಪ್ರೇರಣಾ ಕಂಬಂ, ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ, ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ರೇಷ್ಮಾ. ಇವರೆಲ್ಲ ಈ ಬಾರಿ ಬಿಗ್ಗ ಬಾಸ್ ಮನೆಗೆ ಬರಹುದು ಅಂತ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಗಳು ಬರ್ತಿವೆ. . . ಈ ಮೇಲಿನ ಎಲ್ಲಾ ವ್ಯಕ್ತಿಗಳ ಹೆಸರು ಕೇಲಿಬಂದಿರುವುದು ಊಹಪೋಹಗಳಷ್ಟೇ.

ಸೋ. . ಹಾಗಾಗಿ ಕಲರ್ಸ್ ಕನ್ನಡ ಅಧಿಕೃತವಾಗಿ ಬಿಗ್ ಬಾಸ್ 12 ರ ಪಟ್ಟಿ ಬಿಡುಗಡೆ ಮಾಡೋ ತನಕ ನಾವು ವೈಟ್ ಮಾಡ್ಲೇ ಬೇಕಿದೆ