Ashwaveega News 24×7 ಅಕ್ಟೋಬರ್. 27: ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಪ್ರಕರಣದ ರಹಸ್ಯ ಬಯಲಾಗುವ ದಿನಗಳು ಹತ್ತಿರ ಬಂದಿದೆ. ಎಸ್ಐಟಿ ತನಿಖೆ ಕೂಡ ಅಂತಿಮ ಹಂತ ತಲುಪಿದೆ. ಇದರ ನಡುವೆಯೇ ಸರ್ಕಾರ ಕೂಡ ಎಸ್ಐಟಿ ವರದಿ ಸಲ್ಲಿಕೆಗೆ ಡೆಡ್ಲೈನ್ ಕೊಟ್ಟಿದೆ ಎನ್ನಲಾಗ್ತಿದೆ. ಈ ತಿಂಗಳಲ್ಲೇ ಪ್ರಕ್ರಿಯೆ ಮುಗಿಸೋಕೆ ಸರ್ಕಾರದಿಂದಲೂ ಖಡಕ್ ಸೂಚನೆ ರವಾನೆಯಾಗಿತ್ತು ಎಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಸಂಬಂಧ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಆ್ಯಂಡ್ ಟೀಮ್ ತನಿಖೆ ನಡೆಸಿದೆ. ಕೇಸ್ಗೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿರುವ ಎಸ್ಐಟಿ ಅಧಿಕಾರಿಗಳು, ರಿಪೋರ್ಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ಈ ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಲು ಸರ್ಕಾರ ಸೂಚನೆ ನೀಡಿದೆ.
ಮುಂದಿನ ವಾರದಲ್ಲಿ ಧರ್ಮಸ್ಥಳ ಕೇಸ್ ತನಿಖೆಯ ಎಸ್ಐಟಿ ರಿಪೋರ್ಟ್ ಸಲ್ಲಿಸೋ ಸಾಧ್ಯತೆ ಇದೆ. ಈಗಾಗಲೇ ಸರ್ಕಾರದಿಂದಲೂ ಸೂಚನೆ ಬಂದ ಹಿನ್ನೆಲೆ ನ್ಯಾಯಾಲಯಕ್ಕೆ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆದಿದ್ದು, ಮುಂದಿನ ವಾರ ಧರ್ಮಸ್ಥಳ ರಹಸ್ಯ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗ್ತದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿತ್ತು. ಅಂದಿನಿಂದ ಧರ್ಮಸ್ಥಳ ಕೇಸ್ ಭಾರೀ ಸದ್ದು ಮಾಡಿತ್ತು. ಈ ನಡುವೆ ದೂರುದೂರರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ವಿವರವಾದ ಹೇಳಿಕೆಯನ್ನೂ ನೀಡಿದ್ದಾರೆ.
