Ashwaveega News 24×7 ಅಕ್ಟೋಬರ್. 25: ಬಾಲಿವುಡ್ ನ ಹಿರಿಯ ನಟ ಸತೀಶ್ ಶಾ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ” ಜಾನೆ ಭಿ ದೋ ಯಾರೋ “, ” ಮೈ ಹೂ ನಾ ” ಮತ್ತು ಹಿಟ್ ಟಿವಿ ಶೋ “ಸಾರಾಭಾಯಿ ವರ್ಸಸ್ ಸಾರಾಭಾಯಿ” ನಂತಹ ಚಿತ್ರಗಳಲ್ಲಿನ ಅಭಿನಯಕ್ಕೆ ಹೆಸರುವಾಸಿಯಾಗಿದ್ದ ಹಿರಿಯ ಬಾಲಿವುಡ್ ನಟ ಸತೀಶ್ ಶಾ ಅವರು ಶನಿವಾರ ನಿಧನರಾದರು ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಹಿಂದಿ ಟಿವಿ ಲೋಕದ ಬಲು ಜನಪ್ರಿಯ ಹಾಸ್ಯ ಧಾರಾವಾಹಿ ‘ಸಾರಾಭಾಯಿ vs ಸಾರಾಭಾಯಿ’ಯಲ್ಲಿ ಸತೀಶ್ ಶಾ ಅವರದ್ದು ಪ್ರಮುಖ ಪಾತ್ರ. ಶಾರುಖ್ ಖಾನ್ ನಟಿಸಿದ್ದ ‘ಮೈ ಹೂ ನಾ’ ಸಿನಿಮಾನಲ್ಲಿ ಉಗುಳುತ್ತಾ ಮಾತನಾಡುವ ಪ್ರಿನ್ಸಿಪಲ್ ಆಗಿ ನಟಿಸಿರುವ ಅವರ ಪಾತ್ರ ಬಲು ಜನಪ್ರಿಯ. ಅಂದಹಾಗೆ ಸತೀಶ್ ಶಾ ಅವರು ಕನ್ನಡದ ಒಂದು ಸಿನಿಮಾನಲ್ಲಿಯೂ ನಟಿಸಿದ್ದಾರೆ. ತಮಿಳಿನ ಮಾಧವನ್, ಅಬ್ಬಾಸ್, ಪ್ರೇಮಾ ನಟಿಸಿರುವ ಕನ್ನಡದ ಸಿನಿಮಾ ‘ಶಾಂತಿ ಶಾಂತಿ ಶಾಂತಿ’ಯಲ್ಲಿ ಸತೀಶ್ ಶಾ ನಟಿಸಿದ್ದಾರೆ. ಕನ್ನಡದ ಹೊರತಾಗಿ ಎರಡು ಮರಾಠಿ ಸಿನಿಮಾಗಳಲ್ಲಿಯೂ ಸತೀಶ್ ಶಾ ನಟಿಸಿದ್ದಾರೆ.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸತೀಶ್ ಶಾ, ಇತ್ತೀಚೆಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶನಿವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರವಿವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
