
ಇತ್ತಿಚಿನ ದಿನಗಳಲ್ಲಿ ಎಲ್ಲಾರು ನಾವು ನೋಡುಗಾರಿಗೆ ಸುಂದರವಾಗಿ ಕಾಣನಲ್ಲು ಬಯಸುತ್ತಿದ್ದು, ತೂಕ ಇಳಿಕೆ ಪ್ರಯತ್ನದಲ್ಲಿ ಹೆಚ್ಚು ಸಕ್ರಿಯಾರಗಿದ್ದಾರೆ.ತೂಕ ಇಳಿಕೆ ಅಂದ್ರೆ ಡಯೆಟ್ ಮಾಡುವುದು ಮಾತ್ರವಲ್ಲ ವ್ಯಾಯಾಮವೂ ಅತ್ಯವಶ್ಯಕ ಎಂದು ಅವರು ಪ್ರತಿಪಾದಿಸುತ್ತಾರೆ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಮಾಡುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ. ವ್ಯಾಯಾಮ ಮಾಡುವುದರಿಂದ ವ್ಯಕ್ತಿಯ ಹೃದಯವು ರಕ್ತವನ್ನು ಪಂಪ್ ಮಾಡುವ ವೇಗವನ್ನು ಹೆಚ್ಚಿಸುತ್ತಾದೆ.
ತೂಕ ಇಳಿಕೆಗೆ ನಾವು ಅನುಸರಿಸುವ ನಮ್ಮ ವೈಯಕ್ತಿಕ ಜೀವನಶೈಲಿ ಸಹ ಮುಖ್ಯವಾಗಿದೆ. ಹಾಗಾದ್ರೆ ತೂಕ ಇಳಿಕೆ ಪ್ರಯತ್ನದಲ್ಲಿರುವ ಒಬ್ಬ ವ್ಯಕ್ತಿ ಏನೆಲ್ಲಾ ಕೆಲಸಗಳನ್ನು ಮಾಡಬೇಕು, ದೇಹದ ಬಗ್ಗೆ ಹೇಗೆ ಕಾಳಜಿವಹಿಸಬೇಕು, ಈ ಎಲ್ಲದರ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ. ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸಿದರೆ 5 ಕೆಜಿ ತೂಕ ಇಳಿಸಿಕೊಳ್ಳಬಹುದಾಗಿದೆ.
ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ. ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು ಕೆಜಿಗಳಷ್ಟು ಮಾತ್ರವೇ ಇಳಿದು ನಿರಾಸೆಗೊಳ್ಳುತ್ತಾರೆ.
ಆದರೆ ತೂಕ ಇಳಿಕೆಗೆ ನಾವು ಅನುಸರಿಸುವ ನಮ್ಮ ವೈಯಕ್ತಿಕ ಜೀವನಶೈಲಿ ಸಹ ಮುಖ್ಯವಾಗಿದೆ. ಹಾಗಾದ್ರೆ ತೂಕ ಇಳಿಕೆ ಪ್ರಯತ್ನದಲ್ಲಿರುವ ಒಬ್ಬ ವ್ಯಕ್ತಿ ಏನೆಲ್ಲಾ ಕೆಲಸಗಳನ್ನು ಮಾಡಬೇಕು, ದೇಹದ ಬಗ್ಗೆ ಹೇಗೆ ಕಾಳಜಿವಹಿಸಬೇಕು, ಈ ಎಲ್ಲದರ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ. ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸಿದರೆ 5 ಕೆಜಿ ತೂಕ ಇಳಿಸಿಕೊಳ್ಳಬಹುದಾಗಿದೆ.
ನೀರು ಕುಡಿಯಿರಿ: ದಿನವಿಡೀ ಹೆಚ್ಚು ನೀರು ಅಥವಾ ಗಿಡಮೂಲಿಕೆ ಚಹಾವನ್ನು ಕುಡಿಯಿರಿ . ಕೆಲವೊಮ್ಮೆ ಹಸಿವಾದಾಗ ನೀರು ಕುಡಿಯುವುದನ್ನು ನಿಲ್ಲಿಸಿದರೆ ಹೆಚ್ಚು ತಿನ್ನಬೇಕು ಎನಿಸುತ್ತದೆ. ನೀವು ಅನಗತ್ಯವಾಗಿ ಅತಿಯಾಗಿ ತಿನ್ನಬಹುದು. ಹಸಿವನ್ನು ನಿಗ್ರಹಿಸುವ ಇನ್ನೊಂದು ವಿಧಾನವೆಂದರೆ ಊಟಕ್ಕೂ ಮುನ್ನ ನೀರು ಕುಡಿಯುವುದು.
ಸಂಸ್ಕರಿಸಿದ ಆಹಾರ : ಸಂಸ್ಕರಿಸಿದ ಆಹಾರಗಳು, ಸಕ್ಕರೆ ತಿಂಡಿಗಳು, ಪಾನೀಯಗಳನ್ನು ಕುಡಿಯುವುದನ್ನು ಕಡಿಮೆ ಮಾಡಿ. ಇದು ಕಡಿಮೆ ಪೌಷ್ಟಿಕಾಂಶದಿಂದ ಕೂಡಿದ್ದು, ಹೆಚ್ಚು ಕ್ಯಾಲೋರಿ ಸಂಗ್ರಹಕ್ಕೆ ಕಾರಣವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಸಂಸ್ಕರಿಸದ ಆಹಾರ ಸೇವನೆಯನ್ನು ಕಡಿಮೆ ಮಾಡಿ.
ವ್ಯಾಯಾಮ ಅತ್ಯಗತ್ಯ : ತೂಕ ಇಳಿಕೆಗೆ ವ್ಯಾಯಾಮ ಕೂಡ ಬಹಳ ಮುಖ್ಯ. ಇದಕ್ಕಾಗಿ ವಾಕಿಂಗ್ ಅಥವಾ ಸೈಕ್ಲಿಂಗ್ನಂತಹ ಏರೋಬಿಕ್ ಚಟುವಟಿಕೆಯನ್ನು ಮಾಡಿ. ನಿಮ್ಮ ತೂಕ ಇಳಿಕೆಗೆ ಏರೋಬಿಕ್ಸ್ ತುಂಬಾ ಉಪಯುಕ್ತವಾಗಿದೆ. ಜೊತೆಗೆ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ.
ನಿದ್ರೆ ಅತ್ಯಗತ್ಯ : ನೀವು ಸಾಕಷ್ಟು ಉತ್ತಮ ನಿದ್ರೆ ಪಡೆಯಬೇಕು . ನಿದ್ರೆಯ ಕೊರತೆಯು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಅನಾರೋಗ್ಯಕರ ಆಹಾರಕ್ಕಾಗಿ ಕಡುಬಯಕೆಗಳನ್ನು ಹೆಚ್ಚಿಸುತ್ತದೆ. ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಹೊಂದಿಸಬೇಕು. ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಈ ಆಹಾರಗಳನ್ನು ತಿನ್ನಿ: ಪೌಷ್ಟಿಕ ಮತ್ತು ಸಮತೋಲಿತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಹೆಚ್ಚು ಕ್ಯಾಲೋರಿ ಆಹಾರಗಳ ಸೇವನೆಯನ್ನು ತಡೆಗಟ್ಟಲು ಹಣ್ಣುಗಳು, ತರಕಾರಿಗಳು, ಪ್ರೋಟೀನ್ಭರಿತ ಪದಾರ್ಥ ಮತ್ತು ಧಾನ್ಯಗಳ ಪದಾರ್ಥವನ್ನು ಹೆಚ್ಚಾಗಿ ತಿನ್ನಿ. ಆಗ ಮಾತ್ರ ನೀವು ಆರೋಗ್ಯವಾಗಿರುತ್ತೀರಿ. ಇವು ಒಟ್ಟಾರೆ ಆರೋಗ್ಯಕ್ಕೆ ಸಹ ಒಳ್ಳೆಯದು. ಈ ಆಹಾರಗಳು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತವೆ. ಜೊತೆಗೆ ಹೊಟ್ಟೆಯನ್ನು ಸದಾ ತುಂಬಿಸಿರುತ್ತದೆ.
ತಟ್ಟೆಯ ಗಾತ್ರ : ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ನಾವು ತಿನ್ನುವ ತಟ್ಟೆಯೂ ನಮ್ಮ ಹಸಿವನ್ನು ನಿರ್ಧರಿಸುತ್ತದೆ. ದೊಡ್ಡ ತಟ್ಟೆಯಲ್ಲಿ ಆಹಾರ ಕಡಿಮೆ ಕಾಣಿಸುವುದರಿಂದ ಹೆಚ್ಚು ಆಹಾರ ಸೇವಿಸುತ್ತೀರಿ. ಅದೇ ಚಿಕ್ಕ ತಟ್ಟೆಯಲ್ಲಿ ತಿಂಡಿ ಹಾಕಿದರೆ ಜಾಸ್ತಿ ಇದೆ ಎಂದೆನಿಸುತ್ತದೆ. ನೀವು ಕಡಿಮೆ ಗಾತ್ರದ ಬಟ್ಟಲುಗಳು, ತಟ್ಟೆಗಳು ಮತ್ತು ಪಾತ್ರೆಗಳಲ್ಲಿ ಕಡಿಮೆ ಊಟ ಮಾಡುತ್ತೀರಿ. ಕಂಪ್ಯೂಟರ್ ಅಥವಾ ಟಿವಿ ಮುಂದೆ ಕುಳಿತು ಊಟ ಮಾಡಬೇಡಿ. ಏಕೆಂದರೆ ಇದು ನಿಮ್ಮನ್ನು ಹೆಚ್ಚು ತಿನ್ನುವಂತೆ ಮಾಡುತ್ತದೆ. ಇದರಿಂದ ನಿಮ್ಮ ದೇಹದ ತೂಕ ಹೆಚ್ಚುತ್ತದೆ.
ಒಟ್ಟಾರೆ ಈ ಮೇಲೆ ತಿಳಿಸಲಾದ ಎಲ್ಲಾ ಟಿಪ್ಸ್ ಕೆಲವು ದಿನಗಳವರೆಗೆ ತಪ್ಪದೇ ಪಾಲಿಸಿದರೆ, ಒಂದು ತಿಂಗಳಲ್ಲೇ 5 ಕೆಜಿಯಷ್ಟು ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ತೂಕವನ್ನು ಕಳೆದುಕೊಳ್ಳುವಾಗ ಆಹಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವ್ಯಾಯಾಮಗಳನ್ನು ಮಾಡಬೇಕು. ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ.