
Ashwaveega News 24×7 ಸೆ. 25: ಪ್ರೀತಿಗೆ ಮನೆಯವರ ವಿರೋಧದ ಹಿನ್ನೆಲೆ ರೈಲಿಗೆ ಸಿಲುಕಿ ಪ್ರೇಮಿಗಳ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಾಲೂರು ತಾಲ್ಲೂಕು ಬ್ಯಾಟರಾಯನಹಳ್ಳಿ ಗ್ರಾಮದ ಬಳಿ ಮುಂಜಾನೆ ಈ ಘಟನೆ ನಡೆದಿದೆ.
ಬ್ಯಾಟರಾಯನಹಳ್ಳಿ ಗ್ರಾಮದ ಬಳಿ ಬೈಕ್ ನಿಲ್ಲಿಸಿರುವ ಇಬ್ಬರು, ಬಳಿಕ ರೈಲ್ಬೇ ಹಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನೂ ಸಾವನ್ನಪ್ಪಿದವರಲ್ಲಿ ಶೆಟ್ಟಹಳ್ಳಿ ಗ್ರಾಮದ ಸತೀಶ್ (18), ಪಣಮಾಕನಹಳ್ಳಿ ಶ್ವೇತ (17) ಮೃತರು ಎನ್ನಲಾಗಿದೆ. ಶ್ವೇತ ಅಪ್ರಾಪ್ತೆಯಾಗಿದ್ದು ಮನೆಯವರನ್ನ ಒಪ್ಪಿಸಲು ಮುಂದಾಗಿದ್ದಾಳೆ.
ಆದ್ರೆ ಎರಡು ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆದ್ರೆ ಯುವತಿ ತಂದೆ ತಾಯಿ ಮಾತ್ರ ನಮಗೇನೂ ಗೊತ್ತೆ ಇಲ್ಲ ಎನ್ನುತ್ತಿದ್ದಾರೆ.
ಇನ್ನೂ ಸತೀಶ್ ಮಾಲೂರಲ್ಲಿ ಐಟಿಐ ಮುಗಿಸಿ ಕಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಶ್ವೇತ ಸಹ ಪಿಯುಸಿ ಮುಗಿಸಿ ಪದವಿ ವ್ಯಾಸಂಗಕ್ಕೆ ತೆರಳುತ್ತಿದ್ದಳು. ಸತೀಶ ಓದು ಮುಗಿಸಿ ಕಳೆದ ನಾಲ್ಕು ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದ.
ಜೊತೆಗೆ ನಿನ್ಮೆ ಹುಟ್ಟು ಹಬ್ಬ ಹಿನ್ನೆಲೆ ಗ್ರಾಮದ ಸ್ನೇಹಿತರೊಂದಿಗೆ ಅದ್ದೂರಿಯಾಗಿ ಬರ್ತ್ ಡೇ ಸಲಬ್ರೇಷನ್ ಮಾಡಿಕೊಂಡಿದ್ದಾನೆ. ಆದ್ರೆ ಬೆಳಗಾಗುವವಷ್ಟರಲ್ಲಿ ಇಬ್ಬರು ಒಬ್ಬರನ್ನೊಬ್ಬರು ತಬ್ಬಕೊಂಡು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ದಿಂದ ಬಂಗಾರಪೇಟೆ ಬೆಂಗಳೂರಿಗೆ ತೆರಳುವ ರೈಲಿಗೆ ಸಿಲುಕಿದ ಪರಿಣಾಮ ಬಾಲಕಿ ನಜ್ಜಗುಜ್ಜಾಗಿದ್ರೆ, ರೈಲು ಡಿಕ್ಕಿಯ ರಭಸಕ್ಕೆ ಯುವಕ ರೈಲು ಹಳಿಯಿಂದ ಪಕ್ಕದಲ್ಲಿ ಬಿದ್ದಿದ್ದಾನೆ. ಸ್ಥಳಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.