
Jagannath Puri Rath Yatra Begins Today
ಇಂದಿನಿಂದ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಲಿದೆ. ಈ ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ. ಗಂಟೆ, ಶಂಖಗಳು ಮತ್ತು ‘ಜೈ ಜಗನ್ನಾಥ’ ಮಂತ್ರಗಳ ನಡುವೆ ರಥಗಳು ಚಲಿಸುಲಿದ್ದು, ಪುರಿಯ ವಾತಾವರಣವು ಅದ್ಭುತ ಮತ್ತು ದೈವಿಕ ಶಕ್ತಿಯಿಂದ ತುಂಬಿರಲಿದೆ. ಈ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಉತ್ಸವವನ್ನು ವೀಕ್ಷಿಸಲು ಈಗಾಗಲೇ ಲಕ್ಷಾಂತರ ಭಕ್ತರು ಪುರಿಯನ್ನು ತಲುಪಿದ್ದಾರೆ. ರಥಯಾತ್ರೆ 9 ದಿನಗಳವರೆಗೆ ಇರಲಿದೆ.
ಪುರಿಯ ರಥಯಾತ್ರೆಯನ್ನು ಧರ್ಮ, ಸಂಸ್ಕೃತಿ ಮತ್ತು ಸಾಮರಸ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು, ಶ್ರೀಕೃಷ್ಣ (ಜಗನ್ನಾಥ), ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ತಮ್ಮ ಚಿಕ್ಕಮ್ಮನ ಮನೆಯಾದ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಗವಂತನ ರಥದ ಹಗ್ಗವನ್ನು ಎಳೆಯುವ ಅಥವಾ ಅದನ್ನು ಮುಟ್ಟುವ ಯಾವುದೇ ಭಕ್ತನು ಪುಣ್ಯ ಮತ್ತು ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಜಗನ್ನಾಥ ದೇವರ ನಂದಿಘೋಷ, ಬಲಭದ್ರನ ತಾಳಧ್ವಜ ಮತ್ತು ದೇವಿ ಸುಭದ್ರೆಯ ದರ್ಪದಾಳನ ರಥವು ಸಂಪೂರ್ಣವಾಗಿ ಸಿದ್ಧವಾಗಿದ್ದು ಭವ್ಯವಾಗಿ ಅಲಂಕರಿಸಲ್ಪಟ್ಟಿದೆ. ಈ ಬೃಹತ್ ರಥಗಳನ್ನು ನಿರ್ಮಿಸಲು ಸಾಂಪ್ರದಾಯಿಕ ಕುಶಲಕರ್ಮಿಗಳು ತಿಂಗಳುಗಟ್ಟಲೆ ಶ್ರಮವಹಿಸಿದ್ದಾರೆ. ಈ ರಥಗಳ ಭವ್ಯತೆ ಮತ್ತು ಸಾಂಪ್ರದಾಯಿಕ ಕಲಾ ಶೈಲಿಯು ಅವುಗಳನ್ನು ಅನನ್ಯವಾಗಿಸುತ್ತದೆ.
ನಂದಿಘೋಷ (ಭಗವಾನ್ ಜಗನ್ನಾಥನ ರಥ) 18 ಚಕ್ರಗಳನ್ನು ಹೊಂದಿದ್ದು, 45 ಅಡಿ ಎತ್ತರವಿದೆ. ತಾಲಧ್ವಜ (ಬಲಭದ್ರ ರಥ) 16 ಚಕ್ರಗಳನ್ನು ಹೊಂದಿದೆ ಮತ್ತು 44 ಅಡಿ ಎತ್ತರವಿದೆ. ಹಾಗೂ ದರ್ಪದಾಳನ (ಸುಭದ್ರಾ ರಥ) 14 ಚಕ್ರಗಳನ್ನು ಹೊಂದಿದ್ದು, 43 ಅಡಿ ಎತ್ತರವಿದೆ.