
zameer ahmed says i met cm siddaramaiah
ಪ್ರಸ್ತುತ ರಾಜ್ಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಮನೆಯ ಹಂಚಿಕೆ ಲಂಚ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಹೆಸರು ಕೇಳಿ ಬರುತ್ತಿದ್ದು, ಅವರ ರಾಜೀನಾಮೆಗೆ ಒತ್ತಾಯವೂ ಹೆಚ್ಚಿದೆ. ಈ ನಡುವೆ ಬುಧವಾರ ಮುಖ್ಯಮಂತ್ರಿ ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ಜಮೀರ್ ಅಹಮದ್ ಖಾನ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಈ ಭೇಟಿ ಕುರಿತು ಇಂದು ಮಾಧ್ಯಮಗಳಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಸಿಎಂ ಭೇಟಿಯಾಗಿ ನನ್ನ ವಿರುದ್ಧ ಕೇಳಿ ಬಂದ ಆರೋಪದ ಕುರಿತು ಸ್ಪಷ್ಟನೆ ನೀಡಿದ್ದೇನೆ ಎಂದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಎಲ್ಲೂ ನೇರ ಆರೋಪಗಳಿಲ್ಲ. ಇದು ಮಾಧ್ಯಮದ ಸೃಷ್ಟಿ. ಬಿ.ಆರ್.ಪಾಟೀಲ್ ನನ್ನ ಮೇಲೆ ನೇರ ಆರೋಪ ಮಾಡಿರಲಿಲ್ಲ. ಈ ಕುರಿತು ಈಗಾಗಲೇ ಹೇಳಿದ್ದೇನೆ. ಪಂಚಾಯತ್ ಅಧ್ಯಕ್ಷನ ಪತ್ರಕ್ಕೆ ಮನೆ ಮಂಜೂರಾತಿ ಆಗಿದೆ. ಆದರೆ, ಮಾಧ್ಯಮದಲ್ಲಿ ನನ್ನ ಹೆಸರು ಬಂತು. ಈ ಹಿನ್ನೆಲೆಯಲ್ಲಿ ಸಿಎಂ ನಿನ್ನೆ ದೆಹಲಿಯಿಂದ ಹಿಂದಿರುಗಿದ ಮೇಲೆ ಈ ಕುರಿತು ವರದಿ ಕೊಟ್ಟಿದ್ದೇನೆ ಎಂದರು.
ಬಿ.ಆರ್. ಪಾಟೀಲ್ 6 ಸಾವಿರ ಮನೆ ಕೇಳಿದರು. ಅದರಲ್ಲಿ ನಾವು 900 ಮನೆ ಕೊಟ್ಟಿದ್ದೇವೆ. ಸಿಎಂಗೆ ವರದಿ ಕೊಡಬೇಕಿತ್ತು ಕೊಟ್ಟಿದ್ದೇನೆ. ಬಿ.ಆರ್. ಪಾಟೀಲ್ ಭೇಟಿ ಮಾಡ್ತೇನೆ ಎಂದಿದ್ದರು. ನಿನ್ನೆ ಬಿ.ಆರ್. ಪಾಟೀಲ್ ಭೇಟಿ ಮಾಡ್ತೇನೆ ಎಂದಿದ್ರು. ಆದರೆ, ಅವರು ಸಿಎಂ, ಡಿಸಿಎಂ ಭೇಟಿ ಮಾಡಿದ್ದಾರೆ ಎಂದರು
ಬದಲಾವಣೆ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮದು ಹೈಕಮಾಂಡ್ ಇರುವ ಪಕ್ಷ. ನಾಳೆಯೇ ನಿರ್ಧಾರ ತೆಗೆದುಕೊಳ್ಳಬಹುದು. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಅದಕ್ಕೆ ನಾವೆಲ್ಲ ಬದ್ದರಾಗಿರಬೇಕು. ನಾನಿರಲಿ, ರಾಜಣ್ಣ ಇರಲಿ, ಮತ್ತೊಬ್ಬ ಇರಲಿ. ಹೈಕಮಾಂಡ್ ನಿರ್ಧಾರಕ್ಕೆ ಬದ್ದವಾಗಿ ಇರಬೇಕು ಎಂದು ತಿಳಿಸಿದರು.