Ashwaveega News 24×7 ಜನವರಿ 23 – ಬೆಂಗಳೂರು : ಐಪಿಎಲ್ ಆರಂಭಕ್ಕೆ ದಿನಗಣನೆ ನಡೆಯುತ್ತಿರುವಾಗಲೇ ಕನ್ನಡಿಗರ ಹೆಮ್ಮೆಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬಗ್ಗೆ ಭಾರೀ ಸುದ್ದಿಯೊಂದು ಹರಿದಾಡುತ್ತಿದೆ. RCB ಟೀಂ ಮಾರಾಟದ ವದಂತಿ ಜೋರಾಗಿದ್ದು, ತಂಡದ ಮಾಲೀಕತ್ವ ಬದಲಾಗುವ ಸಾಧ್ಯತೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.
RCB ತಂಡವನ್ನು ಖರೀದಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಹಾಗೂ ಉದ್ಯಮಿ ಆದಾರ್ ಪೂನಾವಾಲಾ ತೀವ್ರ ಆಸಕ್ತಿ ತೋರಿಸಿದ್ದಾರೆ ಎಂಬ ಸುದ್ದಿ ಐಪಿಎಲ್ ವಲಯದಲ್ಲಿ ಕುತೂಹಲ ಮೂಡಿಸಿದೆ. RCB ಖರೀದಿಗೆ ಸಾಧ್ಯವಿರುವಷ್ಟು ದೊಡ್ಡ ಮಟ್ಟದ ಬಿಡ್ ಮಾಡುವುದಾಗಿ ಆದಾರ್ ಪೂನಾವಾಲಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದೂ ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಸಂಸ್ಥೆಯ ಸ್ವಾಮ್ಯದಲ್ಲಿರುವ RCB ತಂಡದ ಮೌಲ್ಯವು ಸುಮಾರು ₹18,000 ರಿಂದ ₹20,000 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. IPLನಲ್ಲಿ ಹಾಲಿ ಚಾಂಪಿಯನ್ ಆಗಿಲ್ಲದಿದ್ದರೂ, RCB ಜನಪ್ರಿಯತೆಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವಾಗಿದೆ. ಇದರಿಂದಲೇ ತಂಡದ ಮೇಲೆ ದೊಡ್ಡ ಉದ್ಯಮಿಗಳ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ.
IPL ಆರಂಭಕ್ಕೂ ಮುನ್ನವೇ RCBಗೆ ಹೊಸ ಓನರ್ ಬರುವುದೇ? ಕನ್ನಡಿಗರ ನೆಚ್ಚಿನ ತಂಡದ ಭವಿಷ್ಯ ಯಾವ ದಿಕ್ಕಿಗೆ ಹೋಗಲಿದೆ? ಎಂಬುದು ಈಗ ಎಲ್ಲರ ಗಮನ ಸೆಳೆದಿರುವ ಪ್ರಶ್ನೆಯಾಗಿದೆ. ಅಧಿಕೃತ ಘೋಷಣೆಗೆ ಇನ್ನೂ ಕಾಯಬೇಕಾದರೂ, RCB ಮಾರಾಟದ ವದಂತಿ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
