Ashwaveega News 24×7 ಜನವರಿ 24 -ಬೆಂಗಳೂರು : ಕಾರ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ . ನಿನ್ನೆ ರಾತ್ರಿ BMW ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬರು ಮನೆಯೊಂದರ ಎದುರು ಕಾರನ್ನು ಪಾರ್ಕ್ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮನೆ ಮಾಲೀಕರು, ಕಾರನ್ನು ಬೇರೆಡೆ ಪಾರ್ಕ್ ಮಾಡುವಂತೆ ಸೂಚಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ವಾಗ್ವಾದ ನಡೆಯಿದ್ದು, ನಂತರ ಗಲಾಟೆ ಮತ್ತು ಮಾರಾಮಾರಿಯಾಗಿ ಪರಿವರ್ತನೆಯಾಗಿದೆ. ಈ ವಿಚಾರ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಕೇಶವ ರಾಜಣ್ಣ ಅವರ ಅಳಿಯ ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಹೊಸ ಕಾರಿನ ಪೂಜೆಯ ಹಿನ್ನೆಲೆಯಲ್ಲಿ ಕೇಶವ ರಾಜಣ್ಣ ಅವರ ಕುಟುಂಬ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿತ್ತು ಎನ್ನಲಾಗಿದೆ.
ಮೂರು ಕಾರುಗಳಲ್ಲಿ ಬಂದಿದ್ದ ರಾಜಣ್ಣ ಕುಟುಂಬದವರು ವಾಹನಗಳನ್ನು ಪಾರ್ಕ್ ಮಾಡಿದ ವೇಳೆ, ಪಾರ್ಕಿಂಗ್ ವಿಚಾರವಾಗಿ ಮನೆ ಮಾಲೀಕ ಮತ್ತು ರಾಜಣ್ಣ ಅವರ ಅಳಿಯ ನಡುವೆ ಜಗಳ ಉಂಟಾಗಿದೆ. ಜಗಳ ತೀವ್ರಗೊಂಡು ಕೈಕಾಲು ಜೋಡಿಸುವ ಮಟ್ಟಿಗೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
