Ashwaveega News 24×7 ಜನವರಿ 26 – ಕನಕಪುರ : ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಎದುರಲ್ಲೇ ಬಿಗ್ಬಾಸ್ ವಿನ್ನರ್ ಗಿಲ್ಲಿ ಅವರ ಹವಾ ಜೋರಾಗಿ ಬೀಸಿದ ಘಟನೆ ಕನಕಪುರ ಕನಕೋತ್ಸವದಲ್ಲಿ ಗಮನ ಸೆಳೆದಿದೆ. ವೇದಿಕೆ ಎದುರು ಸೇರಿದ್ದ ಅಭಿಮಾನಿಗಳು “ಗಿಲ್ಲಿ.. ಗಿಲ್ಲಿ..” ಎಂದು ನಿರಂತರ ಘೋಷಣೆ ಕೂಗುತ್ತಿದ್ದ ದೃಶ್ಯ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತು.
ಕನಕಪುರ ಕನಕೋತ್ಸವ ಈ ಬಾರಿ ಸಂಪೂರ್ಣವಾಗಿ “ಗಿಲ್ಲಿ ಮಯ” ಆಗಿದ್ದು, ಬಿಗ್ಬಾಸ್ ವಿನ್ನರ್ ಗಿಲ್ಲಿ ವೇದಿಕೆಗೆ ಕಾಲಿಟ್ಟ ಕ್ಷಣದಿಂದಲೇ ಜನಸಾಗರ ಉತ್ಸಾಹದಿಂದ ಕೂಗಿದರು . ಗಿಲ್ಲಿಯ ಸರಳತೆ, ಪಂಚಿಂಗ್ ಡೈಲಾಗ್ಗಳು ಮತ್ತು ನಟನ ಕಾಮಿಡಿ ಟೈಮಿಂಗ್ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು.
ಕಾರ್ಯಕ್ರಮದ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗಿಲ್ಲಿಯನ್ನು ಮನದಾಳದಿಂದ ಹಾಡಿಹೊಗಳಿದರು. “ಮಾತಿನ ಮಲ್ಲ” ಎಂದೇ ಖ್ಯಾತಿ ಪಡೆದ ಡಿಕೆಶಿ, ಗಿಲ್ಲಿಯ ಮಾತಿನ ಚಾತುರ್ಯ, ಜನಸಂಪರ್ಕ ಮತ್ತು ಯುವಜನತೆಯ ಮೇಲಿನ ಪ್ರಭಾವವನ್ನು ಹೇಳುವ ಮೂಲಕ ಹೊಗಳಿದರು. ಈ ವೇಳೆ ಗಿಲ್ಲಿಗೆ ನೀಡಿದ ಪ್ರಶಂಸೆಗಳಿಗೆ ಅಭಿಮಾನಿಗಳ ಚಪ್ಪಾಳೆ ಗದ್ದಲ ಮುಗಿಲು ಮುಟ್ಟಿತು .
ಗಿಲ್ಲಿಯ ನಟನ ಕಾಮಿಡಿ ಮತ್ತು ವೇದಿಕೆಯ ಸಹಜ ವರ್ತನೆಗೆ ಅಭಿಮಾನಿಗಳು ಫಿದಾ ಆಗಿದ್ದು, ಪ್ರತಿಯೊಂದು ಪಂಚಿಂಗ್ ಡೈಲಾಗ್ಗೆ ಜೋರಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಗಿಲ್ಲಿಯ ಸಂಭಾಷಣೆಗಳು ಕಾರ್ಯಕ್ರಮದ ಹೈಲೈಟ್ ಆಗಿ ಮೂಡಿಬಂದವು .
ಈ ಕನಕೋತ್ಸವದಲ್ಲಿ ಬಿಗ್ಬಾಸ್ ಸ್ಪರ್ಧಿಗಳಾದ ಕಾವ್ಯ, ಸ್ಪಂದನಾ, ಕ್ಯಾಪ್ಟನ್ ರಘು ಕೂಡ ಭಾಗವಹಿಸಿದ್ದು, ಅವರಿಗೂ ಭರ್ಜರಿ ಸ್ವಾಗತ ದೊರಕಿತು. ಆದರೆ ವೇದಿಕೆಯ ಕೇಂದ್ರಬಿಂದುವಾಗಿ ಗಿಲ್ಲಿಯೇ ಮಿಂಚಿದ್ದು, ಜನರ ಗಮನ ಸಂಪೂರ್ಣವಾಗಿ ಅವರತ್ತ ಕೇಂದ್ರೀಕೃತವಾಯಿತು. ಒಟ್ಟಿನಲ್ಲಿ, ಡಿಸಿಎಂ ಡಿಕೆಶಿ ಸಮ್ಮುಖದಲ್ಲೇ ಬಿಗ್ಬಾಸ್ ಗಿಲ್ಲಿಯ ಹವಾ ಜೋರಾಗಿ ಬೀಸಿದ್ದು, ಕನಕಪುರ ಕನಕೋತ್ಸವವನ್ನು ಸ್ಮರಣೀಯ ಕಾರ್ಯಕ್ರಮವನ್ನಾಗಿ ಮಾಡಿತು .
