Ashwaveega News 24×7 ಜನವರಿ 26 – ಬಿಗ್ಬಾಸ್ ವೇದಿಕೆಯಲ್ಲಿ ಗಂಭೀರ ಮಾತುಗಳ ನಡುವೆ ಹಾಸ್ಯಕ್ಕೂ ಕೊರತೆ ಇರಲಿಲ್ಲ. ಬಿಗ್ಬಾಸ್ ವಿನ್ನರ್ ಗಿಲ್ಲಿ ಹಾಗೂ ಕ್ಯಾಪ್ಟನ್ ರಘು ನಡುವಿನ ತಮಾಷೆಯ ಮಾತಿನ ಜಗಳ ವೇದಿಕೆಯನ್ನು ನಗುವಿನ ಅಲೆಯಲ್ಲಿ ತೂಗಾಡಿಸಿತು.
ಕಾರ್ಯಕ್ರಮದ ವೇಳೆ ಕ್ಯಾಪ್ಟನ್ ರಘು, ಗಿಲ್ಲಿಯನ್ನು ಕಾಲೆಳೆದಾಗ ಕ್ಷಣಮಾತ್ರಕ್ಕೆ ವೇದಿಕೆ ‘ಕುಚಿಕುಗಳ ಕೋಳಿ ಜಗಳ’ದಂತೆ ಕಂಡಿತು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗಿಲ್ಲಿ, “ಏ.. ರಘು ಅಣ್ಣಾ… ಬಾರಣ್ಣ ಇಲ್ಲಿ” ಎಂದು ಹೇಳುತ್ತಲೇ ರಘುವನ್ನು ವೇದಿಕೆಯಲ್ಲೇ ತಬ್ಬಿಕೊಂಡು ಪ್ರೇಕ್ಷಕರ ಗಮನ ಸೆಳೆದರು.
ಇದೇ ವೇಳೆ ಹಳೆಯ ಬಿಗ್ಬಾಸ್ ಡೈಲಾಗ್ ನೆನೆಪಿಸಿಕೊಂಡ ರಘು, “ಈಗಲೂ ನನ್ನ ಅಮುಕಿ ಸಾಯಿಸಿ ಬಿಡು ಆಯ್ತಾ…” ಎಂದು ತಮಾಷೆಯಾಗಿ ಹೇಳಿ ನಗು ತರಿಸಿದರು. ಇದಕ್ಕೆ ಕೈ ತಪ್ಪದೆ ಪಂಚ್ ಕೊಟ್ಟ ಗಿಲ್ಲಿ, “ನೀವು ಇನ್ನೂ ನಮ್ಮ ಮನೆಗೆ ಬಂದೇ ಇಲ್ಲ. ಊಟಕ್ಕೆ ಕರೆಯುತ್ತಲೇ ಇದ್ದೇನೆ” ಎಂದರು. ಆದರೆ ರಘು ಮಾತ್ರ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾ, “ಇಲ್ಲ.. ಇಲ್ಲ.. ನಾನು ನಿಮ್ಮ ಮನೆಗೆ ಬರಲ್ಲ. ಊಟಕ್ಕೆ ಹೋದ್ರೆ ಊರಿಗೆ ತಿಥಿ ಊಟ ಹಾಕಿಸ್ತಾರೆ” ಎಂದು ಹೇಳಿ ಜನರನ್ನು ನಗಿಸಿದರು.
ಇಷ್ಟಕ್ಕೇ ಬಿಡದ ಗಿಲ್ಲಿ, “ಅಷ್ಟೊಂದು ಕೋಪ ಇದ್ರೆ ನಾನು ಬರಲ್ಲ ಅಣ್ಣ. ಈಗ ನೀನು ಹೋಗಿ ಕೂತ್ಕೋ, ನನಗೆ ಭಯ ಆಗುತ್ತೆ” ಎಂದು ವೇದಿಕೆಯಲ್ಲೇ ಕಾಮಿಡಿ ಪಂಚಿಂಗ್ ಹೇಳಿ ಮತ್ತಷ್ಟು ಚಪ್ಪಾಳೆ ಗಿಟ್ಟಿಸಿದರು. ಗಂಭೀರತೆಗಿಂತ ನಗು ಹೆಚ್ಚು ಮೂಡಿಸಿದ ಈ ಗಿಲ್ಲಿ–ರಘು ಸಂಭಾಷಣೆ, ವೇದಿಕೆಯನ್ನು ಕ್ಷಣಕಾಲ ಸಂಪೂರ್ಣ ಮನರಂಜನಾ ರಂಗವನ್ನಾಗಿ ಮಾಡಿತು.
