Ashwaveega News 24×7 ಫೆಬ್ರವರಿ 2026 – ನವದೆಹಲಿ : ಈ ಬಜೆಟ್ನಲ್ಲಿ ಮಧ್ಯಮವರ್ಗದ ಪೌರರಿಗೆ ದೊಡ್ಡ ಸಹಾಯ ನೀಡುವ ಕ್ರಮಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ತೆರಿಗೆ ನೀತಿ ಸರಳೀಕರಣ ಮತ್ತು ನಾನಾ ರಿಯಾಯಿತಿಗಳ ಮೂಲಕ ತೆರಿಗೆ ಪಾವತಿಗಳನ್ನು ಸುಲಭಗೊಳಿಸಲಾಗಿದೆ.
ಮುಖ್ಯ ಅಂಶಗಳು:
- ಹೊಸ ತೆರಿಗೆ ಕಾಯ್ದೆ ಏಪ್ರಿಲ್ 1ರಿಂದ ಜಾರಿಗೆ ಬರುವಂತಾಗಿದೆ.
- ಟಿಸಿಎಸ್ ಪ್ರಮಾಣವನ್ನು 5%ರಿಂದ 2%ಕ್ಕೆ ಇಳಿಸಲಾಗಿದೆ.
- ಐಟಿ ಪಾವತಿಗೆ ಗಡುವು ಮಾರ್ಚ್ 31ರವರೆಗೆ ನಿಗದಿಪಡಿಸಲಾಗಿದೆ.
- ಸಣ್ಣ ಆದಾಯ ತೆರಿಗೆ ಪಾವತಿದಾರರಿಗೆ ಆರು ತಿಂಗಳ ಹೆಚ್ಚುವರಿ ಸಮಯ, ಜುಲೈ 31ರವರೆಗೆ ಐಟಿಆರ್1, ಐಟಿಆರ್2 ಸಲ್ಲಿಸಲು ಅವಕಾಶ.
- ಮೋಟಾರ್ ಆಕ್ಸಿಡೆಂಟ್ ವಿಮೆ ಪಾವತಿಗಳಿಗೆ ತೆರಿಗೆ ಸಡಿಲಿಕೆ ದೊರೆಯಲಿದೆ.
- ವಿದೇಶಿ ಆಸ್ತಿಗಳ ಮೇಲೆ ಒನ್ ಟೈಮ್ ಸ್ಕೀಮ್ ಜಾರಿಗೆ ಬರಲಿದೆ.
ಹೊಸ ತೆರಿಗೆ ಸ್ಲಾಬ್ (ಹೊಸ ರೆಜಿಮ್):
- 0–4 ಲಕ್ಷ – ನಿಲ್
- 4–8 ಲಕ್ಷ – 5%
- 8–12 ಲಕ್ಷ – 10%
- 12–16 ಲಕ್ಷ – 15%
- 16–20 ಲಕ್ಷ – 20%
- 20–24 ಲಕ್ಷ – 25%
- 24 ಲಕ್ಷ ಮೇಲ್ಪಟ್ಟು – 30%
ಈ ಸರಳೀಕರಣದಿಂದ ಮಧ್ಯಮವರ್ಗದ ಕುಟುಂಬಗಳಿಗೆ ತೆರಿಗೆ ಬಾಧೆ ಕಡಿಮೆಯಾಗಲಿದೆ ಮತ್ತು ತೆರಿಗೆ ಪಾವತಿಗಳ ನಿರ್ವಹಣೆ ಸುಲಭವಾಗುತ್ತದೆ ಎಂದು ಸರ್ಕಾರ ಹೇಳಿದೆ.
