Ashwaveega News 24×7 ಫೆಬ್ರವರಿ 03 -2026 : ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರೋಪಿಗಳೇ ಇಲ್ಲದ UDR (Unnatural Death Report) ಪ್ರಕರಣಕ್ಕೆ ಮೊದಲ ಬಾರಿಗೆ ಎಸ್ಐಟಿ (Special Investigation Team) ರಚನೆಯಾಗಿದೆ.
ಈ ಹಿಂದೆ ಕೊಲೆ, ವಂಚನೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಎಸ್ಐಟಿ ರಚನೆಯಾಗಿತ್ತು. ಆದರೆ ಆರೋಪಿಗಳ ಹೆಸರೇ ಇಲ್ಲದ UDR ಕೇಸ್ಗೆ ಎಸ್ಐಟಿ ರಚನೆಯಾಗಿರುವುದು ರಾಜ್ಯದಲ್ಲೇ ಅಪರೂಪದ ಘಟನೆ .
ಗನ್ ಫೈರ್ ಮೂಲಕ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿಲ್ಲ, ದೂರಿನಲ್ಲಿಯೂ ಒಬ್ಬರ ಹೆಸರನ್ನೂ ಉಲ್ಲೇಖಿಸಲಾಗಿಲ್ಲ.
ಸಾಮಾನ್ಯವಾಗಿ ಬೇರೆ ಬೇರೆ UDR ಪ್ರಕರಣಗಳಲ್ಲಿ ಕನಿಷ್ಠ ಮಟ್ಟದ ಅನುಮಾನಾಸ್ಪದ ಆರೋಪಿಗಳಾದರೂ ಇರುತ್ತಾರೆ. ಆದರೆ ರಾಯ್ ಪ್ರಕರಣದಲ್ಲಿ ಯಾವುದೇ ಅನುಮಾನಿತ ಆರೋಪಿಗಳಿಲ್ಲದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
