Ashwaveega News 24×7 ಫೆಬ್ರವರಿ 18 -2026 : ಡಾಲಿ ನಿರ್ಮಾಣದ ಚಿತ್ರದಲ್ಲಿ ಅಭಿನಯಿಸಿರುವ ನಟ ಸೂರ್ಯ ಪ್ರಖ್ಯಾತ್ ಅವರಿಗೆ ಖಾಕಿ ಬಿಗ್ ಶಾಕ್ ಎದುರಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮಾರಾಕಾಸ್ತ್ರ ಪ್ರದರ್ಶನ ಮಾಡಿದ ಆರೋಪದ ಹಿನ್ನೆಲೆ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಇತ್ತೀಚೆಗೆ ಬಿಡುಗಡೆಯಾದ JC ಚಿತ್ರದ ಪ್ರಚಾರ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ನಗರದ ವೀರೇಶ್ ಥಿಯೇಟರ್ ಮುಂದೆ ಅಭಿಮಾನಿಗಳು ನೀಡಿದ್ದ ಲಾಂಗ್ ಅನ್ನು ನಟ ಸೂರ್ಯ ಪ್ರಖ್ಯಾತ್ ಹಿಡಿದು ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೇ ವಿಡಿಯೋ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಪಷ್ಟೀಕರಣಕ್ಕೆ ನೋಟಿಸ್ ಜಾರಿ ಮಾಡಿದ್ದರು.
ನೋಟಿಸ್ ಹಿನ್ನೆಲೆ ನಟ ಸೂರ್ಯ ಪ್ರಖ್ಯಾತ್ ಅವರು ಗೋವಿಂದರಾಜನಗರ ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಹಾಜರಾದರು. ವಿಡಿಯೋದಲ್ಲಿ ಬಳಕೆಯಾಗಿದೆ ಎನ್ನಲಾದ ಲಾಂಗ್ ಅನ್ನು ಕೂಡ ತಮ್ಮೊಂದಿಗೆ ತಂದಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮಾರಾಕಾಸ್ತ್ರ ಪ್ರದರ್ಶನ ಮಾಡಿರುವ ಕುರಿತು ಖಾಕಿ ತಂಡ ನಟರಿಂದ ಮಾಹಿತಿ ಪಡೆದುಕೊಳ್ಳುತ್ತಿದೆ. ಘಟನೆ ವೇಳೆ ಭದ್ರತಾ ಕ್ರಮಗಳು ಏನಿದ್ದವು, ಎಂಬುದರ ಬಗ್ಗೆ ಕುರಿತು ವಿಚಾರಣೆ ನಡೆಯುತ್ತಿದೆ.
ಈ ಘಟನೆ ಸಿನಿರಂಗದಲ್ಲಿ ಸಾಕಷ್ಟು ಚರ್ಚೆವಾಗಿದ್ದು , ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಪ್ರದರ್ಶನಗಳಿಗೆ ಕಾನೂನುಬದ್ಧ ನಿಯಮಗಳ ಪಾಲನೆ ಅಗತ್ಯ ಎಂಬ ಸಂದೇಶ ಮತ್ತೊಮ್ಮೆ ಸ್ಪಷ್ಟವಾಗಿದೆ.
