Ashwaveega News 24×7 ಫೆಬ್ರವರಿ 24 – 2026 : ಧಾರವಾಡ : ಸರ್ಕಾರಿ ಉದ್ಯೋಗಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಯುವ ಸಮೂಹ ಸಿಡಿದೆದ್ದಿದೆ. ಮುಖ್ಯಮಂತ್ರಿ Siddaramaiah ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು .
ಧಾರವಾಡದ Jayanagar Circle ಕಡೆಗೆ ಭಾರೀ ಜಾಥಾ ನಡೆಸಿದ ವಿದ್ಯಾರ್ಥಿಗಳು, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಒತ್ತಾಯಿಸಿದರು. “ಕೆಲಸ ಭರ್ತಿ ಮಾಡೋಕೆ ಇನ್ನೆಷ್ಟು ವರ್ಷ ಬೇಕು?”, “ಹಲವು ವರ್ಷಗಳಿಂದ ಕೆಲಸಕ್ಕಾಗಿ ನಾವು ಕಾಯ್ತಿದ್ದೇವೆ” ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .
ಪ್ರತಿಭಟನೆಗೆ ಸಾಗರೋಪಾದಿಯಲ್ಲಿ ವಿದ್ಯಾರ್ಥಿಗಳು ಎಂಟ್ರಿ ನೀಡಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಯುವಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಪೊಲೀಸರ ನಿರ್ಬಂಧದ ನಡುವೆಯೂ ಪ್ರತಿಭಟನೆ ತೀವ್ರಗೊಂಡಿತು.
ಈ ಹೋರಾಟಕ್ಕೆ Akhila Karnataka Students Association (AKSA) ಬೆಂಬಲ ನೀಡಿದ್ದು, ಸರ್ಕಾರವು ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದೆ. ಉದ್ಯೋಗಾಕಾಂಕ್ಷಿಗಳು ಇದೇ ಬೇಡಿಕೆಗಾಗಿ ಈ ಹಿಂದೆಯೂ ಹೋರಾಟ ನಡೆಸಿದ್ದರು . ಆದರೆ ಸ್ಪಷ್ಟ ಕ್ರಮ ಕಾಣದ ಹಿನ್ನೆಲೆ ಮತ್ತೆ ಬೀದಿಗೆ ಇಳಿದಿದ್ದಾರೆ.
ಸರ್ಕಾರ ಈ ಪ್ರತಿಭಟನೆಗೆ ಹೇಗೆ ಪ್ರತಿಕ್ರಿಯಿಸಲಿದೆ ? ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸ್ಪಷ್ಟ ಘೋಷಣೆ ಬರುತ್ತದೆಯೇ ? ಎಂಬ ಕುತೂಹಲ ಈಗ ಹೆಚ್ಚಾಗಿದೆ.
