Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ಜೈಲು ಬಂಧನದಲ್ಲಿರುವ ನಟ ದರ್ಶನ್ ನ್ಯಾಯಾಲಯ ವಿಚಾರಣೆಯ ವೇಳೆ ಜಡ್ಜ್ಗೆ ಧನ್ಯವಾದ ಹೇಳಿದ ಅಪರೂಪದ ಘಟನೆ ನಡೆದಿದೆ. ಜೈಲಿನಲ್ಲಿ ಟಿವಿ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ದರ್ಶನ್ಗೆ, “ನಾವು ನಮ್ಮ ಕರ್ತವ್ಯ ಮಾಡಿದ್ದೇವೆ, ಥ್ಯಾಂಕ್ಸ್ ಬೇಡ” ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ಇದೇ ವೇಳೆ, ವಿಡಿಯೋ ಕಾನ್ಫರೆನ್ಸ್ (VC) ಮೂಲಕ ಹಾಜರಾಗುವ ಬದಲು ನೇರವಾಗಿ ಕೋರ್ಟ್ಗೆ ಹಾಜರಾಗಲು ಅವಕಾಶ ನೀಡುವಂತೆ ದರ್ಶನ್ ಮನವಿ ಮಾಡಿದರು. “ಕೋರ್ಟ್ಗೆ ಬಂದರೆ ಒಂದಿನವಾದರೂ ಮನೆಯೂಟ ಸಿಗುತ್ತದೆ. ಜೈಲಿನ ಊಟ ಸಾಕಾಗುತ್ತಿಲ್ಲ,” ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು .
ಅಷ್ಟೇ ಅಲ್ಲ, ಕುಟುಂಬ ಸದಸ್ಯರನ್ನು ಒಳಗೆ ಭೇಟಿಯಾಗಲು ಅವಕಾಶ ನೀಡುವಂತೆ ಕೂಡ ಕೋರಿದರು. ಈ ಸಂಬಂಧ ಅಧಿಕೃತ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ಸೂಚನೆ ನೀಡಿದರು. ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳದ ನ್ಯಾಯಾಲಯ, ಅರ್ಜಿ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿತು.
ದರ್ಶನ್ ಅವರನ್ನು ನೇರವಾಗಿ ಕೋರ್ಟ್ಗೆ ಕರೆತಂದರೆ ಅಭಿಮಾನಿಗಳ ದಟ್ಟಣೆ ಹೆಚ್ಚುವ ಸಾಧ್ಯತೆ ಇದೆ. ಭದ್ರತಾ ವ್ಯವಸ್ಥೆ ಕುರಿತಾಗಿ ಪೊಲೀಸರು ಮುನ್ನೆಚ್ಚರಿಕೆ ವಹಿಸುವ ಅಗತ್ಯವೂ ಎದುರಾಗಬಹುದು.
ಈ ನಡುವೆ, ದರ್ಶನ್ರ ಎರಡು ಬೇಡಿಕೆಗಳನ್ನು ನ್ಯಾಯಾಲಯ ಈಡೇರಿಸುತ್ತದೆಯೇ ಎಂಬುದರ ಬಗ್ಗೆ ಕುತೂಹಲ ಮುಂದುವರಿದಿದೆ.
