Ashwaveega News 24×7 ಫೆಬ್ರವರಿ 26 – 2026 ಬೆಂಗಳೂರು : ದಕ್ಷಿಣ ಭಾರತದ ಸಿನಿ ತಾರೆಗಳು Rashmika Mandanna ಮತ್ತು Vijay Deverakonda ಅವರ ವಿವಾಹ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಿದೆ . ಫೆಬ್ರವರಿ 26 ರಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಈ ಜೋಡಿ ಸಪ್ತಪದಿ ತುಳಿದಿದ್ದಾರೆ .
ಮದುವೆ ಸಮಾರಂಭ ಉದಯಪುರ ನಗರದ ಹೊರವಲಯದಲ್ಲಿರುವ ಐಷಾರಾಮಿ ITC Udaipur Resort ನಲ್ಲಿ ನಡೆದಿದ್ದು , ರೆಸಾರ್ಟ್ನ ಸೌಂದರ್ಯ ಮತ್ತು ವ್ಯವಸ್ಥೆಗಳು ಎಲ್ಲರ ಗಮನ ಸೆಳೆದಿವೆ .

ರೆಸಾರ್ಟ್ನ ವಿಶೇಷತೆಗಳನ್ನು ನೋಡುವುದಾದರೆ : ಶಾಂತಿಯುತ ಹಾಗೂ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಈ ರೆಸಾರ್ಟ್ ಮದುವೆ ಸಮಾರಂಭಗಳಿಗೆ ಪ್ರಸಿದ್ಧವಾಗಿದೆ. ಒಳಾಂಗಣ ಡಿನ್ನರ್ ಹಾಲ್, ವಿಶಾಲ ಹುಲ್ಲುಹಾಸು, ಹೊರಾಂಗಣ ಕಾರ್ಯಕ್ರಮಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಥಳಗಳು ಇಲ್ಲಿವೆ.
ಸುಮಾರು 117 ಐಷಾರಾಮಿ ಕೊಠಡಿಗಳನ್ನು ಹೊಂದಿರುವ ಈ ಹೋಟೆಲ್ ಕೊಠಡಿಗಳಲ್ಲಿ ದೊಡ್ಡ ಕಿಟಕಿಗಳ ಮೂಲಕ ಪ್ರಕೃತಿ ದೃಶ್ಯವನ್ನು ಆಸ್ವಾದಿಸಲು ಅವಕಾಶ ಇದೆ. ಆರಾಮದಾಯಕ ಹಾಸಿಗೆಗಳು, ಆಧುನಿಕ ಸೌಲಭ್ಯಗಳು ಮತ್ತು ಪ್ರೀಮಿಯಂ ಸೇವೆಗಳು ಅತಿಥಿಗಳಿಗೆ ವಿಶಿಷ್ಟ ಅನುಭವ ನೀಡುತ್ತವೆ. ಈ ರೆಸಾರ್ಟ್ನಲ್ಲಿ ಒಂದು ರಾತ್ರಿಗೆ 20,000ರಿಂದ 70,000 ರೂಪಾಯಿವರೆಗೆ ದರ ಇದೆ .

ಇಬ್ಬರೂ ‘Geetha Govindam’ ಮತ್ತು ‘Dear Comrade’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇದೇ ಸಮಯದಲ್ಲಿ ಸ್ನೇಹ ಪ್ರೀತಿಯಾಗಿ ಬೆಳೆದಿತ್ತು ಎಂಬ ಮಾತು ಕೇಳಿಬಂದಿತ್ತು.

ಮದುವೆಗೆ ಮುನ್ನ ಹಳದಿ ಹಾಗೂ ಸಂಗೀತ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದು, ತೆಲಂಗಾಣದಿಂದ ಆಗಮಿಸಿದ ಪುರೋಹಿತರ ತಂಡವು ಸಂಪ್ರದಾಯ ಬದ್ಧವಾಗಿ ವಿಧಿವಿಧಾನಗಳನ್ನು ನೆರವೇರಿಸಿದ್ದಾರಂತೆ. ಕುಟುಂಬ ಸದಸ್ಯರು , ಆಪ್ತರು ಮತ್ತು ಸಿನಿ ವಲಯದ ಕೆಲ ಗಣ್ಯರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ ರಶ್ಮಿಕಾ ಅವರಿಗೆ ತಾಳಿ ಕಟ್ಟಿದರೆಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ಉದಯಪುರದ ಐಷಾರಾಮಿ ವಾತಾವರಣದಲ್ಲಿ ನಡೆದ ಈ ಮದುವೆ ಸಮಾರಂಭ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
