Ashwaveega News 24×7 ಮಾರ್ಚ್ 05 – 2026 : ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಕೊಲ್ಲಿ ಯುದ್ಧದ ಉದ್ವಿಗ್ನತೆ ಇದೀಗ ದಕ್ಷಿಣ ಏಷ್ಯಾ ಸಮುದ್ರ ಮಾರ್ಗಗಳಿಗೂ ತಲುಪಿದೆ. ಹಿಂದೂ ಮಹಾಸಾಗರದಲ್ಲಿ ಇರಾನ್ಗೆ ಸೇರಿದ ಯುದ್ಧನೌಕೆಯೊಂದನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಕ್ಷಿಪಣಿ ದಾಳಿ ನಡೆಸಿ ಮುಳುಗಿಸಿದೆ ಎಂಬ ಗಂಭೀರ ಮಾಹಿತಿ ಹೊರಬಿದ್ದಿದೆ.
ಭಾರತದ ವಿಶಾಖಪಟ್ಟಣದಲ್ಲಿ ನಡೆದ ಮಿಲನ್ ನೇವಲ್ ಎಕ್ಸರ್ಸೈಸ್ನಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದ ವೇಳೆ ಇರಾನ್ನ ಯುದ್ಧ ನೌಕೆಗೆ ಈ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಇರಾನ್ ನೌಕಾಪಡೆಯ IRIS ದೇನಾ ಯುದ್ಧ ನೌಕೆ ಕೇವಲ ಎರಡು ವಾರಗಳ ಹಿಂದೆ ವೈಜಾಗ್ನಲ್ಲಿ ನಡೆದ ಮಿಲನ್ ನೌಕಾಪಡೆ ಅಭ್ಯಾಸದಲ್ಲಿ ಭಾಗಿಯಾಗಿತ್ತು .
ಆ ಸಮಯದಲ್ಲಿ ಇರಾನ್ ನೌಕಾಪಡೆಯ ಯೋಧರು ನಡೆಸಿದ ಕವಾಯತು ಪ್ರದರ್ಶನವನ್ನು ಸಾವಿರಾರು ಜನರು ವೀಕ್ಷಿಸಿದ್ದರು. ವಿಶಾಖಪಟ್ಟಣದ ಸಮುದ್ರ ತೀರದಲ್ಲಿ ನಡೆದ ಈ ಪ್ರದರ್ಶನ ಜನರ ಗಮನ ಸೆಳೆದಿತ್ತು.
ಆದರೆ ಈಗ ಭಾರತದಿಂದ ವಾಪಸ್ ಆಗುತ್ತಿದ್ದ ಅದೇ ನೌಕೆಯನ್ನು ಅಮೆರಿಕದ ಸಬ್ಮೆರಿನ್ ಸದ್ದಿಲ್ಲದೆ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ . ದಾಳಿಯ ಪರಿಣಾಮ ನೌಕೆ ಭಾರೀ ಸ್ಫೋಟದೊಂದಿಗೆ ಮುಳುಗಿದ್ದು, ನೌಕೆಯಲ್ಲಿ ಇದ್ದ 80ಕ್ಕೂ ಹೆಚ್ಚು ಇರಾನ್ ಯೋಧರು ದುರ್ಮರಣ ಹೊಂದಿರುವುದಾಗಿ ಹೇಳಲಾಗುತ್ತಿದೆ.
ಈ ಘಟನೆ ಭಾರತಕ್ಕೆ ಸಮೀಪದ ಹಿಂದೂ ಮಹಾಸಾಗರದಲ್ಲಿ ನಡೆದಿರುವುದರಿಂದ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ದಕ್ಷಿಣ ಏಷ್ಯಾ ಸಮುದ್ರ ಮಾರ್ಗಗಳ ಸುರಕ್ಷತೆ ಕುರಿತು ಹೊಸ ಪ್ರಶ್ನೆಗಳು ಉದ್ಭವವಾಗಿದ್ದು, ಮಧ್ಯಪ್ರಾಚ್ಯದ ಯುದ್ಧದ ಕಿಚ್ಚು ಈಗ ಈ ಭಾಗಕ್ಕೂ ಹಬ್ಬುವ ಸಾಧ್ಯತೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಭಾರತದ ಕಾಲ ಬುಡದಲ್ಲೇ ನಡೆದ ಈ ದಾಳಿ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆ ಇದೆ …
