Ashwaveega News 24×7 ಮಾರ್ಚ್ 31 – 2026 : ಮೈಸೂರು : ತೀವ್ರ ಬಿಸಿಲಿನ ತಾಪಕ್ಕೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ತತ್ತರಿಸುತ್ತಿರುವ ನಡುವೆಯೇ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೋತಿಗಳ ವಿಶಿಷ್ಟ ವರ್ತನೆ ಗಮನ ಸೆಳೆದಿದೆ .
ಭಕ್ತರ ಕೈಯಲ್ಲಿದ್ದ ಕೂಲ್ ಡ್ರಿಂಕ್ಸ್ಗಳನ್ನು ಕಿತ್ತುಕೊಂಡು ಕುಡಿಯುತ್ತಿರುವ ಕೋತಿಗಳ ಅಪರೂಪದ ದೃಶ್ಯ ಇದೀಗ ವೈರಲ್ ಆಗಿದೆ. ವಿಶೇಷವಾಗಿ ‘ಜಿರಾ’ ಪಾನೀಯವನ್ನು ಕುಡಿದು ಕೋತಿಗಳು ದಣಿವು ನಿವಾರಿಸಿಕೊಂಡಂತೆ ಕಾಣಿಸಿಕೊಂಡಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ .
ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಈ ವಿಚಿತ್ರ ದೃಶ್ಯ ಕಂಡುಬಂದಿದ್ದು, ಸಕ್ಕರೆ ಅಂಶವಿರುವ ತಂಪು ಪಾನೀಯಗಳತ್ತ ಕೋತಿಗಳು ಹೆಚ್ಚು ಆಕರ್ಷಿತರಾಗಿರುವುದು ಸ್ಪಷ್ಟವಾಗಿದೆ. ಭಕ್ತರ ಕೈಯಲ್ಲಿದ್ದ ಬಾಟಲಿಗಳ ಮೇಲೆ ದಾಳಿ ನಡೆಸಿ ಪಾನೀಯಗಳನ್ನು ಕಿತ್ತುಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ .
ಈ ಘಟನೆ ಪ್ರಾಣಿಗಳ ವರ್ತನೆಯಲ್ಲಿ ಬಿಸಿಲಿನ ಪರಿಣಾಮ ಹೇಗೆ ಬೀರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಪರಿಣಮಿಸಿದೆ .
