**EDS: FILE PHOTO** Bengaluru: In this Friday, Jan 5, 2024 file photo, Janata Dal (Secular) leader H.D. Kumaraswamy addresses a press conference, in Bengaluru. (PTI Photo/Shailendra Bhojak)(PTI06_09_2024_000128B)
Ashwaveega News 24×7 ಏಪ್ರಿಲ್ 4– 2026 : ದಾವಣಗೆರೆ: ಬೈಎಲೆಕ್ಷನ್ ಹಿನ್ನಲೆಯಲ್ಲಿ ದಾವಣಗೆರೆ ರಾಜಕೀಯ ಅಖಾಡ ಇಂದು ಮತ್ತಷ್ಟು ಕಾವು ಪಡೆದಿದ್ದು, H. D. Kumaraswamy ಅವರು ಇಂದು ಪ್ರಚಾರ ಕಣಕ್ಕಿಳಿಯುತ್ತಿದ್ದಾರೆ.
ಇಂದು ಮಧ್ಯಾಹ್ನ ದಾವಣಗೆರೆಗೆ ಆಗಮಿಸಲಿರುವ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ Srinivas Dasakariyappa ಅವರ ಪರ ಮತಯಾಚನೆ ನಡೆಸಲಿದ್ದಾರೆ. ಈ ಪ್ರಚಾರಕ್ಕೆ ಕೇಂದ್ರ ಸಚಿವ V. Somanna ಸಹ ಸಾಥ್ ನೀಡಲಿದ್ದು, ಜಂಟಿ ಕ್ಯಾಂಪೇನ್ ಮೂಲಕ ಮತದಾರರನ್ನು ಸೆಳೆಯಲು ತಂತ್ರ ರೂಪಿಸಲಾಗಿದೆ.
ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ದಾಸಕರಿಯಪ್ಪ ಪರ ಪ್ರಚಾರ ನಡೆಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. ಹಾಸಬಾವಿ ಸರ್ಕಲ್ನಿಂದ ಚಾಮರಾಜಪೇಟೆ ರಸ್ತೆಯವರೆಗೆ ಭರ್ಜರಿ ರೋಡ್ಶೋ ನಡೆಸುವ ಯೋಜನೆ ಇದೆ.
ಇದಕ್ಕೂ ಮುನ್ನ ಪ್ರಚಾರದ ಭಾಗವಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ‘ಟೆಂಪಲ್ ರನ್’ ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಆಗಮನದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿಗರ ಒಗ್ಗಟ್ಟು ಕೂಡ ಗಮನ ಸೆಳೆಯುತ್ತಿದೆ. ಹಿರಿಯ ನಾಯಕರು G. M. Siddeshwar ಹಾಗೂ Murugesh Nirani ಕೂಡ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಕುಮಾರಸ್ವಾಮಿ ಎಂಟ್ರಿಯಿಂದ ದಾವಣಗೆರೆ ಚುನಾವಣಾ ಕಣ ಮತ್ತಷ್ಟು ರಂಗೇರಲಿದ್ದು, ಮತದಾರರ ಗಮನ ಸೆಳೆಯಲು ಬಿಜೆಪಿ ಭರ್ಜರಿ ತಂತ್ರ ರೂಪಿಸಿದೆ.
