Ashwaveega News 24×7 ಮೇ 05 – 2026 : ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸುದ್ದಿ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹೊಸ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ TVK ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಸರ್ಕಾರ ರಚನೆ ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈ ಬಾರಿ ಚುನಾವಣೆಯಲ್ಲಿ TVK ಪಕ್ಷ ಸೆಂಚುರಿ ಬಾರಿಸಿ, ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ವಿಶೇಷವಾಗಿ ನಾಯಕ ವಿಜಯ್ ಎರಡು ಕ್ಷೇತ್ರಗಳಲ್ಲಿ — ತಿರುಚ್ಚಿ ಪೂರ್ವ ಮತ್ತು ಪೆರಂಬೂರ್ನಲ್ಲಿ ಜಯಭೇರಿ ಬಾರಿಸಿದ್ದಾರೆ. ಇದರಿಂದಾಗಿ ಒಂದು ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದರ ನಡುವೆ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಂದಿದೆ. ವಿಜಯ್ ಸಂಪುಟದಲ್ಲಿ ನಟಿ ತ್ರಿಶಾ ಕೃಷ್ಣನ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ತ್ರಿಶಾ ಅವರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಿ, ನಂತರ ಡಿಸಿಎಂ ಪಟ್ಟ ಕಟ್ಟುವ ಪ್ಲಾನ್ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ .
ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ , ಇತ್ತೀಚೆಗೆ ತ್ರಿಶಾ ವಿಜಯ್ ಅವರ ನೀಲಾಂಕರೈ ನಿವಾಸಕ್ಕೆ ಭೇಟಿ ನೀಡಿರುವುದು ಗಮನ ಸೆಳೆದಿದೆ . ರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಈಗಾಗಲೇ ಹಲವು ಗಾಸಿಪ್ಗಳು ಹರಿದಾಡುತ್ತಿದ್ದರೆ, ಈ ಭೇಟಿ ಹೊಸ ಕುತೂಹಲಕ್ಕೆ ಕಾರಣವಾಗಿದೆ .
ಅದರ ಜೊತೆಗೆ, ಹಿಂದೊಮ್ಮೆ ತ್ರಿಶಾ “ನಾನು ಸಿಎಂ ಆಗ್ತೀನಿ” ಎಂದು ಹೇಳಿದ್ದ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸದ್ದು ಮಾಡುತ್ತಿದ್ದು, ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಮತ್ತಷ್ಟು ಜೋರಾಗಿದೆ.
ಒಂದು ಕಡೆ ಗೆಳತಿಯ ಹುಟ್ಟುಹಬ್ಬ, ಮತ್ತೊಂದು ಕಡೆ ಭರ್ಜರಿ ರಾಜಕೀಯ ಗೆಲುವು — ವಿಜಯ್ಗೆ ಇದು ಡಬಲ್ ಸಂಭ್ರಮ ಅಂತನೇ ಹೇಳಬಹುದು …
ಆದರೆ, ಈ ಎಲ್ಲಾ ಮಾಹಿತಿ ಅಧಿಕೃತವಾಗಿಲ್ಲ. ಇದು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಅಂದಾಜು ಮತ್ತು ಒಳಗಣ್ಣಿನ ವರದಿಗಳ ಆಧಾರವಾಗಿದೆ.
