
ಇಂಗ್ಲೆಂಡ್ ವಿರುದ್ದ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ಗಳ ಜಯ ದಾಖಲಿಸಿದೆ. ಕಟಕ್ನಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆನ್ ಡಕೆಟ್ (65), ಫಿಲ್ ಸಾಲ್ಟ್ (26) ಮೊದಲ ವಿಕೆಟ್ಗೆ 81 ರನ್ಗಳನ್ನು ಗಳಿಸಿ ಉತ್ತಮ ಜೂತೆಯಾಟ ಕೊಟ್ಟರು. ನಂತರ ಬಂದ ಜೋ ರೂಟ್ (69), ಹ್ಯಾರಿ ಬ್ರೂಕ್ (31), ಜೋಸ್ ಬಟ್ಲರ್ (34), ಲಿಯಾಮ್ ಲಿವಿಂಗ್ಸ್ಟೋನ್ (41) ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ 49̤5 ಓವರ್ಗಳಲ್ಲಿ 304 ರನ್ಗಳಿಗೆ ಅಲೌಟ್ ಆಯಿತ್ತು. ಬೌಲಿಂಗ್ನಲ್ಲಿ ಭಾರತ ಪರ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದರೆ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದುಕೊಂಡರು.

ಭಾರತಕ್ಕೆ ಆರಂಭಿಕ ಮುನ್ನಡೆ
305 ರನ್ಗಳ ಗುರಿ ಪಡೆದ ಭಾರತಕ್ಕೆ ಆರಂಭಿಕರಿಂದ ಉತ್ತಮ ಜೊತೆಯಾಟ ಸಿಕ್ಕಿತ್ತು. ಮೊದಲ ವಿಕೆಟ್ಗೆ ನಾಯಕ ರೋಹಿತ್ ಶರ್ಮಾ (119), ಶುಬಮನ್ ಗಿಲ್ (60), ವಿರಾಟ್ ಕೊಹ್ಲಿ (5),ಶ್ರೇಯಸ್ ಅಯ್ಯರ್ (44), ಅಕ್ಷರ್ ಪಾಟೇಲ್ (41), ಕೆಎಲ್ ರಾಹುಲ್ (10), ಹಾರ್ದಿಕ್ ಪಾಂಡ್ಯ (10) ಬ್ಯಾಟಿಂಗ್ ನೆರವಿನಿಂದ ಭಾರತ 44.3 ಓವರ್ಗಳಲ್ಲಿ ಗುರಿ ತಲುಪಿತ್ತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿದೆ.
ಪಂದ್ಯ ಶ್ರೇಷ್ಠ: ರೋಹಿತ್ ಶರ್ಮಾ

ಅಭಿ಼ಷೇಕ್ ಎಸ್