
ಐಪಿಎಲ್ ಹಾಗೂ ಡಬ್ಲೂಪಿಎಲ್ನಲ್ಲಿ ಚಾಂಪಿಯನ್ ಆಗಲು ವಿಫಲವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಚಾಂಪಿಯನ್ ಖಾತೆ ತೆರದಿದೆ. ದುಬೈ ಕ್ಯಾಪಿಟಲ್ಸ್ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಡೆಲ್ಲಿ ಫ್ರಾಂಚೈಸಿ ಒಡೆತತನ ದುಬೈ ಕ್ಯಾಪಿಟಲ್ಸ್ ಚಾಂಪಿಯನ್ ಆಗಿ ಹೊರಹಮ್ಮಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿ ದುಬೈ ಕ್ಯಾಪಿಟಲ್ಸ್ ಪ್ರಶಸ್ತಿ ಜಯಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದುಬೈ ಕ್ಯಾಪಿಟಲ್ಸ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್ಸ್ ನಿರ್ಧಾರವನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಡೆಸರ್ಟ್ ವೈಪರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ ಅಲೆಕ್ಸ್ ಹೇಲಗ್ಸ್ (5೦),ರಹಮಾನುಲ್ಲಾ ಗುರ್ಬಾಝ್ (5),ಡಾನ್ ಲಾರೆಮಸ್ (10), ಬಹ ಬೇಗನೇ ಔಟ್ ಆದರು. ಇವರ ನಂತರ ಬ್ಯಾಟಿಂಗ್ಗೆ ಬಂದ ಮ್ಯಾಕ್ಸ್ ಹೋಕ್ಡನ್ (76), ಸ್ಯಾಮ್ ಕರನ್ (62) ಬ್ಯಾಟಿಂಗ್ ನೆರವಿನಿಂದ ಡೆಸರ್ಟ್ ವೈಪರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗೆ 189 ರನ್ ಗಳಿಸಿತ್ತು.

ದುಬೈ ಕ್ಯಾಪಿಟಲ್ಸ್ಗೆ 190 ರನ್ಗಳ ಗುರಿ
190 ರನ್ಗಳ ಗುರಿ ಪಡೆದ ದುಬೈ ಕ್ಯಾಪಿಟಲ್ಸ್ಗೂ ಆರಂಭಿಕ ಹಿನ್ನಡೆ ಆಯಿತ್ತು. ಶಾಯ್ ಹೋಪ್ (43), ಡೇವಿಡ್ ವಾರ್ನರ್ (4), ಗುಲ್ಬದ್ದೀನ್ ನೈಬ್ (5),ಸ್ಯಾಮ್ ಬಿಲ್ಲಿಂಗ್ಸ್ (6) ವಿಕೆಟ್ ಕಳೆದುಕೊಂಡು ಸೋಲಿನ ಸ್ಥಿತಿಯಲ್ಲಿತ್ತು. ತಂಡ ಸೋಲಿನ ಸುಳಿಯಲ್ಲಿ ಸಿಲುಕಿದ್ದಾಗ ಕ್ರೀಸಿಗೆ ಬಂದ ರೋವ್ಮನ್ ಪೊವೆಲ್ (63) ರನ್ ಗಳಿಸಿ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್ಗೆ ತಂದರು. ಕೊನೆಯ 3 ಓವರ್ಗಳಿಗೆ 37 ರನ್ಗಳ ಅವಶ್ಯಕತೆಯಿದ್ದಾಗ ಕ್ರೀಸಿಗಿಳಿದ ಸಿಕಂದರ್ ರಾಝ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ದುಬೈ ಕ್ಯಾಪಿಟಲ್ಸ್ ತಂಡವು 19.2 ಓವರ್ಗಳಲ್ಲಿ ಗುರಿಯನ್ನು ಮುಟ್ಟಿ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಯಿತ್ತು..
ಅಭಿಷೇಕ್ ಎಸ್