
ಚಾಂಪಿಯನ್ಸ್ ಟ್ರೋಫಿಯ ಭಾರತ ಹಾಗೂ ನ್ಯೂಜಿಲೆಂಡ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳ ನೇಮಕವಾಗಿದೆ. ಭಾರತ ತಂಡ ಈ ಬಾರಿ ಟೂರ್ನಿಯಲ್ಲಿ ಒಂದು ಪಂದ್ಯ ಸೋಲದೇ ಫೈನಲ್ ಪಂದ್ಯಕ್ಕೆ ಎಂಟ್ರಿ ನೀಡಿದೆ. 2013ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ 2017ರಲ್ಲಿ ಪಾಕಿಸ್ತಾನ ವಿರುದ್ದ ಸೋತಿತ್ತು. ಇದೀಗ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಭಾರತಕ್ಕೆ ಮಿಚೆಲ್ ಸ್ಯಾಂಟ್ಲರ್ ನಾಯಕತ್ವದ ನ್ಯೂಜಿಲೆಂಡ್ ತಂಡದ ಸವಾಲು ಎದುರಾಗಿದೆ. ಮಾರ್ಚ್ 9ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಒಂದು ಫೈನಲ್ ಪಂದ್ಯಕ್ಕೆ ಅಂಪೈರ್ಗಳ ನೇಮಕವಾಗಿದೆ..
ಮೈದಾನದ ಅಂಪೈರ್ಗಳು : ಪಾಲ್ ರೈಫಲ್, ರಿಚರ್ಡ್ ಇಲ್ಲಿಂಗ್ ವರ್ತ್
ಮೂರನೇ ಅಂಪೈರ್: ಜೋಯಲ್ ವಿಲ್ಸನ್
ನಾಲ್ಕನೇ ಅಂಪೈರ್ : ಕುಮಾರ್ ಧರ್ಮಸೇನ
ಪಂದ್ಯದ ರೆಫರಿ: ರಂಜನ್ ಮದುಗಲೆ

ಅಭಿಷೇಕ್.ಎಸ್