
ಭಾರತದ ತಂಡದ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ನೋಡುತ್ತಿದ್ದರೆ ಸದ್ಯಕ್ಕೆ ನಿವೃತ್ತಿ ಆಗೋ ಕಾರಣಗಳೇನು ಕಾಣುತ್ತಿಲ್ಲಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಖಾಸಗಿ ಯೂ ಟ್ರೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು ರೋಹಿತ್ ಶರ್ಮಾ ತಮ್ಮ ಪ್ರದರ್ಶನ ಹೀಗೆ ಮುಂದುವರೆಸಿದರೆ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಬೇರೆ ನಾಯಕರಿಗೆ ಹೋಲಿಕೆ ಮಾಡಿಕೊಂಡರೆ ರೋಹಿತ್ ಶರ್ಮಾರ ದಾಖಲೆ ಅತ್ಯುತ್ತಮವಾಗಿದೆ. ಅವರ ಗೆಲುವಿನ ದಾಖಲೆ 74ರಷ್ಟಿದೆ. ಇದು ಹಿಂದಿನ ಎಲ್ಲ ನಾಯಕರಿಗಿಂತ ಉತ್ತಮ ಎಂದು ಹೊಗಳಿದ್ದಾರೆ. ಜೊತೆಗೆ ರೋಹಿತ್ ಯಾಕೆ ನಿವೃತ್ತಿಯಾಗಬೇಕು. ಕೇವಲ ನಾಯಕತ್ವ ಅಲ್ಲದೇ ಬ್ಯಾಟಿಂಗ್ನಲ್ಲೂ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ನನ್ನ ಪ್ರಕಾರ ರೋಹಿತ್ ಶರ್ಮಾ ಅವರು ನಿವೃತ್ತಿಯಾಗಲು ಸದ್ಯಕ್ಕೆ ಯಾವುದೇ ಕಾರಣ ಕಾಣುತ್ತಿಲ್ಲ, ಅವರು ತಮ್ಮ ಆಟವನ್ನು ಮುಂದುವರೆಸಬೇಕೆಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಅಭಿಷೇಕ್ ಎಸ್