
ಐಪಿಎಲ್ 18ನೇ ಆವೃತ್ತಿ ಮಾರ್ಚ್ 22ರಿಂಡ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ. ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿರುವ ಆರ್ಸಿಬಿ ಮಾರ್ಚ್ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್ ಬಾಕ್ಸ್ ಇವೆಂಟ್ ಅನ್ನು ಹಮ್ಮಿಕೊಂಡಿತ್ತು. ಆದರೆ ಕಾರ್ಯಕ್ರಮದ ಅಯೋಜನೆ ವಿರುದ್ದ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.ಇದಕ್ಕೆ ಕಾರಣ ಲೈವ್ ಸ್ಟ್ರೀಮಿಂಗ್ನಲ್ಲಿ ಸಮಸ್ಯೆ ಉಂಟಾಗಿದ್ದು, ರಾಯಲ್ ಚೆಲರಂಜರ್ಸ್ ಬೆಂಗಳೂರು ಫ್ರಾಂಚೈಸಿ ಅನ್ಬಾಕ್ಸ್ ಕಾರ್ಯಕ್ರಮದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು. ಖ್ಯಾತ ಡಿಜೆ ಟಮ್ಮಿ ಟ್ರಂಪೆಟ್ ಮತ್ತು ಸ್ಥಳೀಯ ಕಲಾವಿದರ ಪ್ರದರ್ಶನಗಳನ್ನು ಅಭಿಮಾನಿಗಳು ಮನಸೊರೆಗೊಂಡರು ಆದರೆ ಇತ್ತ ಲೈವ್ ಸ್ಟ್ರೀಮಿಂಗ್ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಮಾತ್ರ ಸ್ಕ್ರೀಮಿಂಗ್ನ ಗುಣಮಟ್ಟ ಕಳಪೆಯಾಗಿದ್ದು ಕಾರ್ಯಕ್ರಮವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ.99 ರೂಪಾಯಿಗೆ. ಆರ್ಸಿಬಿ ಕಾರ್ಯಕ್ರಮದ ನೇರ ಪ್ರಸಾರವನ್ನು ನಿಗದಿಪಡಿಸಿತ್ತು. ಆದರೆಲೈವ್ ಸ್ಟ್ರೀಮಿಂಗ್ನಲ್ಲಿ ಕಂಡ ಸಮಸ್ಯೆ ಯಿಂದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. 99 ರೂ. ಪಾವತಿಸಿದರೂ ಉತ್ತಮ ಸ್ಟ್ರೀಮಿಂಗ್ ವ್ಯವಸ್ಥೆ ಮಾಡದ ಆರ್ಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಸಮಸ್ಯೆಯಿಂದ ಪಾವತಿ ಮಾಡಿದ 99 ರೂ.ಗಳನ್ನು ಹಿಂತಿರುಗಿಸುವಂತೆ ಆರ್ಸಿಬಿ ವಿರುದ್ದ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಅಭಿಷೇಕ್. ಎಸ್