
ಇದೇ ಮಾರ್ಚ್ 22ರಿಂದ ಅರಂಭವಾಗಲಿರುವ ಐಪಿಎಲ್ ಟೂರ್ನಿಗೆ ಕ್ಷನಗಣನೆ ಆರಂಭವಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿರುವ ಆರ್ಸಿಬಿ ತಂಡಕ್ಕೆ ಪ್ರಯಾಣದ ಅವಧಿ ಹೊರೆಯಾಗಿ ಪರಿಣಮಿಸಿದೆ. 2025ರ ಐಪಿಎಲ್ ಲೀಗ್ನಲ್ಲಿ ಆರ್ಸಿಬಿ ತಂಡ 17084 ಕಿಲೋ ಮೀಟರ್ನಷ್ಟು ಪ್ರಯಾಣ ಮಾಡಬೇಕಿದೆ. ಲೀಗ್ ಹಂತದಲ್ಲಿ ಎಲ್ಲ 10 ತಂಡಗಳು ತಲಾ 14 ಪಂದ್ಯಗಳನ್ನು ಆಡಬೇಕಿದೆ. ಅದರಲ್ಲಿ 7 ಪಂದ್ಯಗಳು ತವರಿನಲ್ಲಿ ಆಡಿದರೆ. ಇನ್ನುಳಿದ 7 ಪಂದ್ಯಗಳು ತವರಿನ ಆಚೆಯಲ್ಲಿ ಆಡಬೇಕಿದೆ. ಹೀಗಾಗಿ ಆರ್ಸಿಬಿ ತಂಡ 17 ಸಾವಿರ ಕಿ.ಮೀ.ನಷ್ಟು ಪ್ರಯಾಣ ಮಾಡಬೇಕಿದೆ. ಉಳಿದ ತಂಡಗಳಿಗೆ ಹೋಲಿಸಿಕೊಂಡರೆ ಆರ್ಸಿಬಿ ಪ್ರಯಾಣ ಮಾಡುವ ಅವಧಿಯೇ ಹೆಚ್ಚು. ಚೊಚ್ಚಲ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬೆಂಗಳೂರ ತಂಡಕ್ಕೆ ಇದೀಗ ಪ್ರಯಾಣದ ಅವಧಿಯ ಜೊತೆಗೆ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಎದರಾಗಿದೆ. ಆರ್ಸಿಬಿ ತನ್ನ ಆರಂಭಿಕ ಪಂದ್ಯವನ್ನು ಕೆಕೆಆರ್ ವಿರುದ್ದ ಕಲ್ಕತ್ತಾದಲ್ಲಿ ಆಡಲಿದೆ.

ಅಭಿಷೇಕ್.ಎಸ್