
ಯದುಗಿರಿ ಮಠದ ಶ್ರೀಶ್ರೀ ಯತಿರಾಜ ರಾಮಾನುಜ ಜೀಯರ್ ಸ್ವಾಮಿಗಳ ಪಟ್ಟಾಭಿಷೇಕದ 11ನೇ ವಾರ್ಷಿಕೋತ್ಸವ ಆಚರಿಸಲಾಯಿತು.. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟದ ಮಧ್ಯ ತಿರುಮಲ ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಿದೆ.. ಧಾನ್ಯಾಧಿವಾಸದಲ್ಲಿರುವ ಶ್ರೀನಿವಾಸ ಸ್ವಾಮಿ ವಿಗ್ರಹ ಮೂರ್ತಿ ಗರ್ಭಗುಡಿಯನ್ನೂ ಪ್ರವೇಶಿಸಿದೆ.. ದಿವ್ಯ ಪ್ರಬಂಧಂ ಗೋಷ್ಠ, ವಿಷ್ಣುಸಹಸ್ರನಾಮ ಪಾರಾಯಣದೊಂದಿಗೆ ಪೂಜಾ ಕೈಂಕರ್ಯನೆರೆವೇರಿತು.. ಮಧ್ಯ ತಿರುಮಲ ಕ್ಷೇತ್ರದಲ್ಲಿ ಯತಿರಾಜ್ ಜಿಯರ್ ಗುರುಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ನೂರಾರು ಭಕ್ತರು ಭಾಗಿಯಾಗಿದ್ದಾರೆ.
