
ಇಂದು ಉತ್ತರ ಪ್ರದೇಶದ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಗತವೈಭವ ಮರುಕಳಿಸಿದೆ… ಪ್ರಧಾನಿ ನರೇಂದ್ರ ಮೋದಿಯವರು ಧರ್ಮ ಧ್ವಜಾರೋಹಣ ನೆರವೇರಿಸಿದ್ರು…ಮೋದಿ ಅವರು 20 ಅಡಿ ಉದ್ದ & 10 ಅಡಿ ಎತ್ತರದ ತ್ರಿಕೋನಾಕಾರದ ಧ್ವಜ ಹಾರಿಸಿದರು..ಕೇಸರಿ ಧ್ವಜವನ್ನು ಹಾರಿಸಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ರು…ಪ್ರಧಾನಿಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾಥ್ ನೀಡಿದರು… ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಮೋದಿ ಮತ್ತು RSS ಮುಖ್ಯಸ್ಥ ಮೋಹನ್ ಭಾಗವತ್ ರಾಮ ದರ್ಬಾರ್ನಲ್ಲಿ ಪ್ರಾರ್ಥನೆ ಸಲ್ಲಿಸಿ ಗರ್ಭಗುಡಿಯಲ್ಲಿ ಆರತಿ ಬೆಳಗಿದರು. ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು … ಇನ್ನೂ ಇಂದು ಇಡೀ ಅಯೋಧ್ಯೆ ರಾಮಮಂದಿರವೇ ಹೂವು, ಕೇಸರಿ ಮಯವಾಗಿ ಝಗಮಗಿಸುತ್ತಿದೆ..
ಅಯೋಧ್ಯೆಯ ರಾಮ ಮಂದಿರದ ಮೇಲೆ ಹಾರಿಸಲಾದ ಕೇಸರಿ ಬಾವುಟ ಹಿಂದೂ ಧರ್ಮದ ಬಹಳ ಪ್ರಾಚೀನ ಇತಿಹಾಸ ಹೊಂದಿದೆ. ದೇಗುಲದ ಮೇಲಿನ ಧರ್ಮ ಧ್ವಜವೇ ದೇವಾಲಯದ ರಕ್ಷಕ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ, ದೇವಾಲಯದ ಮೇಲೆ ಧ್ವಜ ಹಾರಿಸುವುದು ದೇವರ ಉಪಸ್ಥಿತಿಯನ್ನು ಸೂಚಿಸುತ್ತದೆ. ಶಿಖರದ ಮೇಲಿನ ಧ್ವಜವನ್ನು ದೇವತೆಯ ಮಹಿಮೆ, ಶಕ್ತಿ ಮತ್ತು ರಕ್ಷಣೆಯ ಸಂಕೇತವೆಂದು ಧರ್ಮಗ್ರಂಥಗಳು ವಿವರಿಸುತ್ತವೆ. ವಾಲ್ಮೀಕಿ ರಾಮಾಯಣದಲ್ಲಿಯೂ ಧ್ವಜದ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಲಾಗಿದೆ. ತ್ಯಾಗ, ಶೌರ್ಯ ಮತ್ತು ಭಕ್ತಿಯ ಸಂಕೇತವಾಗಿರುವ ಕೇಸರಿ ಧ್ವಜ, ಅಖಂಡ ಹಿಂದೂ ಸಮಾಜ ಒಂದೇ ಎನ್ನುವ ಸಂದೇಶ ಸಾರುತ್ತದೆ. ಅಲ್ಲದೇ, ನಕಾರಾತ್ಮಕ & ದುಷ್ಟ ಶಕ್ತಿಗಳು ತಡೆಯುವ ನಂಬಿಕೆಯಿದೆ.

ರಾಮಮಂದಿರದ ಮೇಲೆ ಹಾರಾಡುತ್ತಿರುವ ಕೇಸರಿ ಬಾವುಟ ತುಂಬಾ ವಿಶೇಷವಾಗಿದ್ದು, ದೈವಿಕ ಧ್ವಜವನ್ನು ಗುಜರಾತ್ನ ಅಹಮದಾಬಾದ್ನಲ್ಲಿ ತಯಾರಿಸಲಾಗಿದೆ. ಅಯೋಧ್ಯೆ ರಾಮ ಮಂದಿರದ ಧಾರ್ಮಿಕ ಧ್ವಜದಲ್ಲಿರುವ ಚಿಹ್ನೆಗಳಿಗೆ ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ. ಕೇಸರಿ ಬಣ್ಣದ ಧ್ವಜ, ಸೂರ್ಯ ದೇವರು ಮತ್ತು ಓಂ ಚಿಹ್ನೆ ಹೊಂದಿದೆ. ಧಾರ್ಮಿಕ ಮಹತ್ವವುಳ್ಳ ವಿಶಿಷ್ಟವಾದ ಮರದ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಲಾಗಿದೆ. 25 ದಿನಗಳಲ್ಲಿ ಈ ಬಾವುಟವನ್ನ ತಯಾರಿಸಲಾಗಿದೆ. ಮೂರು ಪದರಗಳ ಬಟ್ಟೆಯಿಂದ ತಯಾರಿಸಿರುವ ಕೇಸರು ಧ್ವಜದಲ್ಲಿ ಬಳಸಲಾದ ಪ್ರತಿಯೊಂದು ಅಂಶವೂ ಸ್ಥಳೀಯದಾಗಿದೆ. ಇನ್ನೂ ಬಾವುಟದ ಅಂಚುಗಳನ್ನು ಗೋಲ್ಡನ್ ರೇಷ್ಮೆಯಿಂದ ಮಾಡಲಾಗಿದ್ದು, ಎಲ್ಲಾ ಚಿಹ್ನೆಗಳು ಕೈಯಿಂದ ಮಾಡಲಾಗಿದೆ. ಇನ್ನು ಗಂಟೆಗೆ 200 ಕಿ.ಮೀ. ವರೆಗೆ ಬೀಸುವ ಗಾಳಿ ತಡೆದುಕೊಳ್ಳುವ ಶಕ್ತಿಯನ್ನ ಈ ಕೇಸರಿ ಧ್ವಜ ಹೊಂದಿದೆ.
