Ashwaveega News 24×7 ನವೆಂಬರ್. 29: ವಿಧಿ ಅನ್ನೋದು ತುಂಬಾ ಘೋರ ಬಿಡಿ.. ಸಾವು ಅನ್ನೋದು ಯಾರಿಗೆ ಯಾವಾಗ ಬರುತ್ತೆ ಅನ್ನೋದೆ ಗೊತ್ತಾಗಲ್ಲ… ನಮ್ಮ ಸಮಯ ಮೀರಿ ಸಾವು ಬಂದಾಗ, ನಿಂತಲ್ಲೇ ಹೊರಟು ಬಿಡ್ಬೇಕು.. ಶ್ರೀಮಂತರಾದ್ರೂ ಅಷ್ಟೆ , ಕಡು ಬಡವರಾದ್ರೂ ಅಷ್ಟೇ ಮತ್ತೊಂದು ಅವಕಾಶವಿಲ್ಲ.. ಮೇಘನಾ ಬಾಳಲು ಸಹ ಇದೆ ಆಗಿದ್ದು.
ಜಸ್ಟ್ ಒಂದೇ ಒಂದು ಕ್ಷಣ, ಈಕೆ ಬಾಳಲ್ಲಿ ಏನೆಲ್ಲಾ ಆಗೋಯ್ತು ಗೊತ್ತಾ.. ನೀರಿನ ಮೋಟರ್ ಆಫ್ ಮಾಡಲು ಹೋದವ್ಳು, ಮತ್ತೆ ಸೇರಿದ್ದು ಸ್ಮಶಾನ.. 35 ದಿನ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದವ್ಳು ಈಗ ಸಾವನ್ನಪ್ಪಿದ್ದಾಳೆ. ಈ ಘಟನೆ ಹುಬ್ಬಳ್ಳಿಯ ಅಂಚಟಗೇರಿ ಓಣಿಯಲ್ಲಿ ನಡೆದಿದ್ದು, ಆ ದಾರುಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೌದು. . . ವಿದ್ಯುತ್ ಶಾಕ್ ಹೊಡೆದು 23 ವರ್ಷದ ಮೇಘನಾ ಸಾವನ್ನಪ್ಪಿದ್ದಾಳೆ.. ಈ ಘಟನೆ ಹುಬ್ಬಳ್ಳಿಯ ಅಂಚಟಗೇರಿ ಓಣಿಯಲ್ಲಿ ನಡೆದಿದ್ದು , ಈ ದಾರುಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.. ಅಕ್ಟೊಬರ್ 22 ರಂದು ಇಡೀ ಊರಿಗೆ ಊರೇ ದೀಪಾವಳಿಯ ಹಬ್ಬದ ಖುಷಿಯಲ್ಲಿತ್ತು.. ಮೇಘನಾ ಮನೆಗೆ ನೀರು ಬಿಟ್ಟಿದ್ದವಳು, ನಂತರ ಮೋಟರ್ ಆಫ್ ಮಾಡೋದಕ್ಕೆ ಅಂತಾ ಮೋಟರ್ ಪಂಪ್ ಮುಟ್ಟಿದ್ದೇ ಕೊನೇ. ಅಲ್ಲೇ ಕುಸಿದು ಬಿದ್ಲು.. ಅಮ್ಮಾ- ಅಪ್ಪ ಅಂತಾ ಕೂಗಾಡಿದ್ರೂ ಯಾರು ಬರಲ್ಲಿಲ್ಲ.
ಸುಮಾರು 1 ನಿಮಿಷ ಅಲ್ಲೇ ಬಿದ್ರೂ ಯಾರೊಬ್ರೂ ನೋಡ್ಲಿಲ್ಲ.. ಕರೆಂಟ್ ಶಾಕ್ ಹೊಡೆದು ಕೋಮಾಗೆ ಜಾರಿ, ಬರೋಬ್ಬರಿ 35 ದಿನ ಸಾವು ಬದುಕಿನ ಮಧ್ಯೆ ಹೋರಾಟ ಸಹ ನಡೆಸಿದ್ಲು.. ತಂದೆ ತಾಯಿ ಇಲ್ಲದ ಅನಾಥ ಮಗಳಿಗೆ ಒಂದು ಅವಕಾಶ ಕೊಡಪ್ಪ ಅಂತಾ ಇಡೀ ಊರೇ ಕಣ್ಣೀರಿಟ್ಟಿತ್ತು. ಆದ್ರೆ, ಕಲ್ಲಿನ ರೂಪದ ಭಗವಂತನಿಗೆ ಗ್ರಾಮಸ್ಥರ ಕಣ್ಣೀರು ಕಾಣಲೇ ಇಲ್ಲ.
ಹೆತ್ತವರ ಪ್ರೀತಿಯನ್ನೇ ಕಾಣದ ಮಗಳು ಅರ್ಧ ದಾರಿಯಲ್ಲೇ ಬದುಕಿನ ಯಾತ್ರೆ ಮುಗಿಸಿ ಹೊರಟಿದ್ದಾಳೆ. ಕೋಮಾಗೆ ಜಾರಿದವ್ಳು ಮತ್ತೆ ಮಾತಾಡಲೇ ಇಲ್ಲ.. ಕೊನೆಗೂ ಮೇಘಾನಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
