Ashwaveega News 24×7 ನವೆಂಬರ್. 29: ಶಬರಿಮಲೆ ಹೋಗೋ ಭಕ್ತಾಧಿಗಳಿಗೆ ಗುಡ್ ನ್ಯೂಸ್.. ಭಕ್ತರ ಎಷ್ಟೋ ದಿನದ ಕನಸಿಗೆ ‘ಬಿಸಿಎಎಸ್’ ಅಸ್ತು ಅಂದಿದೆ.. ಶಬರಿಮಲೆ ಯಾತ್ರಾರ್ಥಿಗಳು ಇರುಮುಡಿಯಲ್ಲಿ ತೆಗೆದುಕೊಂಡು ಹೋಗುವ ತುಪ್ಪದ ತೆಂಗಿನಕಾಯಿಗಳನ್ನು ವಿಮಾನಯಾನ ಭದ್ರತಾ ನಿಯಂತ್ರಕ ಸಂಸ್ಥೆಯಾದ ‘ಬಿಸಿಎಎಸ್’ ಅನುಮತಿ ನೀಡಿದೆ.
ಸಾಮಾನ್ಯವಾಗಿ ತೆಂಗಿನಕಾಯಿ ದಹನಶೀಲವಾಗಿದ್ದರಿಂದ ಅದನ್ನು ವಿಮಾನದೊಳಗಡೆ ಕ್ಯಾಬಿನ್ ಬ್ಯಾಗೇಜ್ನಲ್ಲಿ ಕೊಂಡೊಯ್ಯಲು ಬಿಡಲಾಗುತ್ತಿರಲಿಲ್ಲ. ಆದರೆ ವಿಶೇಷವಾಗಿ ಶಬರಿಮಲೆ ಯಾತ್ರಾರ್ಥಿಗಳ ಇರುಮುಡಿ ಇರುವ ಬ್ಯಾಗೇಜನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿದ ಬಳಿಕ, ಅಂದರೆ ಎಕ್ಸ್ರೇ, ಸ್ಫೋಟಕ ಪತ್ತೆ ಪರೀಕ್ಷೆ ಹಾಗೂ ವಿಮಾನಯಾನ ಭದ್ರತಾ ಸಿಬ್ಬಂದಿ ಸ್ವಯಂ ಪರೀಕ್ಷೆ ನಡೆಸಿದ ಬಳಿಕ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆಗೆ ಹೋಗುತ್ತಿರುವ ಭಕ್ತಾದಿಗಳು ದೇವರಿಗೆ ಸಮರ್ಪಿಸಲು ತಮ್ಮೊಂದಿಗೆ ಇರುಮುಡಿ ಕಟ್ಟು (ತುಪ್ಪ ಹಾಗೂ ತೆಂಗಿನಕಾಯಿ ಇರುವ ಕಟ್ಟು) ತೆಗಡದುಕೊಂಡು ಹೋಗ್ತಾರೆ. ಈ ನಿಟ್ಟಿನಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿಗದಿತ ಅವಧಿಯವರೆಗೆ ಮಾತ್ರ ಈ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ‘ಬಿಸಿಎಎಸ್ ’ ಸ್ಪಷ್ಟಪಡಿಸಿದೆ.
ಒಣಗಿದ ತೆಂಗಿನಕಾಯಿ ಅಥವಾ ಸಂಪೂರ್ಣ ತೆಂಗಿನಕಾಯಿಯನ್ನು ವಿಮಾನದಲ್ಲಿ ಸಾಗಿಸಲು ಅನುಮತಿ ಇಲ್ಲ ಎಂಬುದು ಹಲವರಿಗೆ ಆಶ್ಚರ್ಯವನ್ನುಂಟು ಮಾಡಬಹುದು. ಈ ನಿಷೇಧದ ಹಿಂದೆ ಗಂಭೀರ ಭದ್ರತಾ ಕಾರಣಗಳಿವೆ.
ಒಣಗಿದ ತೆಂಗಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆ ಇರುತ್ತದೆ, ಇದು ಅತ್ಯಂತ ಸುಡುವ ಗುಣವನ್ನು ಹೊಂದಿದೆ. ವಿಮಾನದ ಒತ್ತಡದ ವಾತಾವರಣದಲ್ಲಿ ಈ ಎಣ್ಣೆ ಬೆಂಕಿಯ ಅಪಾಯವನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ, ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಒಣಗಿದ ತೆಂಗಿನಕಾಯಿಯನ್ನು ಚೆಕ್-ಇನ್ ಲಗೇಜ್ನಲ್ಲಿಯೂ ಸಾಗಿಸಲು ಅನುಮತಿಸುವುದಿಲ್ಲ. ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ, ಒಣಗಿದ ತೆಂಗಿನಕಾಯಿಯನ್ನು ಸುಡುವ ವಸ್ತುವೆಂದು ವರ್ಗೀಕರಿಸಲಾಗಿದೆ, ಇದು ವಿಮಾನದ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ.
