Ashwaveega News 24×7 ನವೆಂಬರ್. 30: ನಟಿ ಆಶಿಕಾ ರಂಗನಾಥ್ ಮಾವನ ಮಗಳು ದುಡುಕಿನ ನಿರ್ಧಾರ ತೆಗೆದುಕೊಂಡು ಪ್ರಾಣಬಿಟ್ಟಿದ್ದಾರೆ. ಹೌದು. . ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಯುವತಿ ಡ್ರಗ್ ಅಡಿಕ್ಟ್ ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ.
ಹಾಸನ ಮೂಲದ ಯುವತಿ ಅಚಲ (22) ನವೆಂಬರ್ 22ರಂದು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದ್ರೆ 10 ದಿನ ಕಳೆದರೂ, ಸಾಕ್ಷ್ಯಗಳಿದ್ದರೂ ಆರೋಪಿ ಬಂಧನ ಆಗದೇ ಇರುವುದು ಅಚಲ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದ ಯುವತಿ ಅಚಲ ತನ್ನ ದೂರದ ಸಂಬಂಧಿ ಮಯಾಂಕ್ ಜೊತೆ ಸ್ನೇಹ ಹೊಂದಿದ್ದರು. ಇದೇ ವೇಳೆ ಪ್ರೀತಿಸುವುದಾಗಿ ನಂಬಿಸಿ ಸುತ್ತಾಡುತ್ತಿದ್ದ ಮಯಾಂಕ್ ಮದುವೆಗೆ ಮೊದಲೇ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದ. ಡ್ರಗ್ ಅಡಿಕ್ಟ್ ಆಗಿದ್ದ ಮಯಾಂಕ್ ಪದೇ ಪದೇ ಸಂಪರ್ಕಕ್ಕೆ ಪೀಡಿಸುತ್ತಿದ್ದ.
ಇದಕ್ಕೆ ಅಚಲ ಒಪ್ಪದಿದ್ದಕ್ಕೆ ದೈಹಿಕ ಹಲ್ಲೆ ನಡೆಸಿ ಮಾನಸಿಕವಾಗಿಯೂ ಕಿರುಕುಳ ಕೊಡ್ತಿದ್ದ. ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಚಲ ತಾಯಿ ಕಣ್ಣೀರಿಟ್ಟಿದ್ದಾರೆ
