Ashwaveega News 24×7 ನವೆಂಬರ್. 30: ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ 1’ ಚಿತ್ರದ ದೈವವನ್ನು ‘ಸ್ತ್ರೀ ದೆವ್ವ’ ಎಂದು ಕರೆದು ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಅಪಹಾಸ್ಯ ಮಾಡಿ ಭಾರೀ ಯಡವಟ್ಟು ಮಾಡಿಕೊಂಡಿದ್ದಾರೆ.
ಹೌದು. . ಶುಕ್ರವಾರ ಗೋವಾದಲ್ಲಿ ನಡೆದ IFFI 2025ರ ಸಮಾರೋಪ ಸಮಾರಂಭದಲ್ಲಿ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಭಾಗಿಯಾಗಿದ್ದರು. ಆ ವೇಳೆ, ರಿಷಬ್ ಎದುರಿನಲ್ಲೇ ಕಾಂತಾರ ಸೀಕ್ವೆಲ್ ಬಗ್ಗೆ, ರಿಷಬ್ ಶೆಟ್ಟಿಯವರ ನಟನೆಯನ್ನು ಹೊಗಳಿ ಮಾತನ್ನಾಡಿದ್ದಾರೆ.
ಇದೇ ವೇಳೆ ರಿಷಬ್ ನಟನೆ ಹೊಗಳುತ್ತ ಅನುಕರಣೆ ಮಾಡುತ್ತ ಅದರಲ್ಲಿ ಇರುವ ‘ದೈವ’ವನ್ನು ‘ಫೀಮೇಲ್ ಘೋಸ್ಟ್’ ಎಂದು ಗೇಳಿ ಭಾರೀ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ರಣವೀರ್ ಸಿಂಗ್ ಅವರು ‘ದೈವ’ವನ್ನು ‘ದೆವ್ವ’ ಎಂದಿದ್ದಲ್ಲದೇ ರಿಷಬ್ ಎದುರಿನಲ್ಲೇ ಅವರನ್ನು ಅನುಕರಣೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಈ ಘಟನೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿ, ನಟ ರಣವೀರ್ ಸಿಂಗ್ ಬಗ್ಗೆ ಹಲವು ಜನರು ತೀರಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಅದೀಗ ವಿವಾದವಾಗುವತ್ತ ಸಾಗಿದೆ.
ರಣವೀರ್ ಸಿಂಗ್ ಅವರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ತೀವ್ರ ಚರ್ಚೆ ಆರಂಭವಾಗಿದೆ.
