Ashwaveega News 24×7 ಡಿಸೆಂಬರ್. 03: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಿಂದೂ ದೇವತೆಗಳ ಅಸ್ತಿತ್ವವನ್ನು ಅಪಹಾಸ್ಯ ಮಾಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೆಡ್ಡಿ, ಹಿಂದೂ ಸಂಪ್ರದಾಯದಲ್ಲಿ ಬಹು ದೇವರುಗಳಿರುವುದನ್ನು ಪ್ರಶ್ನಿಸಿದ್ದಾರೆ.
ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ..? 3 ಕೋಟಿ ಇದ್ದಾರಾ..? ಇಷ್ಟೊಂದು ದೇವರು ಏಕೆ ಇವೆ..? ಅವಿವಾಹಿತರಿಗೆ ಒಬ್ಬ ದೇವರು ಅದು ಹನುಮಾನ್… ಎರಡು ಬಾರಿ ಮದುವೆಯಾಗುವವರಿಗೆ ಇನ್ನೊಂದು ದೇವರು ಮತ್ತು ಮದ್ಯಪಾನ ಮಾಡುವವರಿಗೆ ಇನ್ನೊಂದು ದೇವರು… ಕೋಳಿ ಬಲಿ ನೀಡುವವರಿಗೆ ಬೇರೆ ದೇವರು.. ಇದನ್ನ ಬಿಟ್ಟು ಬೇಳೆ ಮತ್ತು ಅನ್ನಕ್ಕೆ ಮತ್ತೊಬ್ಬ ದೇವರನಿದ್ದಾನೆ.
ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇದ್ದಾನೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಸದ್ಯ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಿಪಕ್ಷಗಳು ಕಿಡಿಕಾರುತ್ತಿವೆ. ರೇವಂತ್ ರೆಡ್ಡಿ ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ರೇವಂತ್ ರೆಡ್ಡಿಗೆ ಯಾವುದೇ ನಾಚಿಕೆ ಇಲ್ಲ. ಎಲ್ಲಾ ಸಭೆಗಳಲ್ಲಿ ಮುಸ್ಲಿಮರಿಂದಾಗಿ ಕಾಂಗ್ರೆಸ್ ಬಂದಿದೆ ಎಂದು ಹೇಳತ್ತಾರೆ.
ಕೂಡಲೇ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಮತ್ತು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
