Ashwaveega News 24×7 ಡಿಸೆಂಬರ್. 09: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಘು ಮತ್ತು ಗಿಲ್ಲಿ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಅದು ಈಗ ಬ್ರೇಕ್ ಆಗುವ ಹಂತಕ್ಕೆ ಅವಾಗವಾಗ ಬರ್ತಿದೆ. ರಘು ಅವರು ಗಿಲ್ಲಿ ಬಗ್ಗೆ ಸಾಕಷ್ಟು ದ್ವೇಷ ಬೆಳೆಸಿಕೊಂಡಿದ್ದಾರೆ. ಈಗ ರಘು ಅವರು ಗಿಲ್ಲಿ ಜೊತೆ ನಡೆದುಕೊಂಡ ರೀತಿಯನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ರಘು ಇಷ್ಟು ದಿನ ನಡೆದುಕೊಂಡ ರೀತಿ ಫೇಕ್ ಆಗಿತ್ತಾ ಎಂಬ ಚರ್ಚೆ ಹುಟ್ಟುವಂತೆ ಆಗಿದೆ.
ಗಿಲ್ಲಿ ನಟ ಜೊತೆ ಆರಂಭದಲ್ಲಿ ರಘು ಚೆನ್ನಾಗಿಯೇ ಇದ್ದರು. ಆದರೀಗ ಗಿಲ್ಲಿ ನಟ ವಿರುದ್ಧವೇ ರಘು ತಿರುಗಿಬಿದ್ದಿದ್ದಾರೆ. ಗಿಲ್ಲಿ ಮನೆ ಮಂದಿಗೆ ಕೊಡೊ ಕಾಟಕ್ಕೆ ರಘು ಸಿಟ್ಟಿ ನೆತ್ತಿಗೇರಿಸಿಕೊಂಡಿದ್ರು. ಇದರ ನಡುವೆ BBK12 ಇತಿಹಾಸದಲ್ಲೇ ಅತ್ಯಂತ ಅಸಭ್ಯ, ಅಮಾನವೀಯ ಹೇಳಿಕೆಯೊಂದು ಕೇಳಿ ಬಂದಿದೆ.
ಕಳೆದ ಎಪಿಸೋಡ್ ನಲ್ಲಿ ಮನೆಯಲ್ಲಿ ಬಿಗ್ ಬಾಸ್ ವಾಯ್ಸ್ ಕೇಳುತ್ತಿರಲಿಲ್ಲ. ಭಯ ಹುಟ್ಟಿಸುವ ವಿಲನ್ ವಾಯ್ಸ್ ಕೇಳುತ್ತಿತ್ತು. ‘ಎಚ್ಚರ.. ನಾಳೆ ಬಾ’ ಎಂಬಂತಹ ಬರಹಗಳು ಆತಂಕ ಹುಟ್ಟಿಸಿವದ್ದವು. ಬೆಚ್ಚಿಬೀಳಿಸುವ ಮುಖವಾಡ, ಪ್ರತಿಕೃತಿಗಳು ಮನೆ ಸೇರಿದ್ದವು.
ಬಿಗ್ ಬಾಸ್ ಮನೆಮಂದಿಗೆ ಒಂದಷ್ಟು ಟಾಸ್ಕ್ ನೀಡಿತ್ತು. ಈ ವೇಳೆ ಅಮಾನವೀಯ ಹೇಳಿಕೆಯೊಂದು ಹೊ ಬಂದಿದೆ. ಬೆಡ್ ರೂಂ ನಲ್ಲಿ ಓಡಾಡ್ತಿದ್ದ ಗಿಲ್ಲಿ ರಘು ಅವರಿಗೆ ಜಾಸ್ತಿ ಮಾತನಾಡಿದ್ರೆ ಅಪ್ಪಂಗೆ ಹೇಳ್ತಿನಿ ಅಂದಿದ್ದಾರೆ.
ಈ ವೇಳೆ ಮಾತಿನ ಬರದಲ್ಲಿ ಊಟ ಮಾಡ್ತಿದ್ದ ರಘು ಅವರು ನಿಂದು ನೀನು ನೋಡ್ಕೋ ಗಿಲ್ಲಿ ನೀನು “ಒಳ್ಳೆ TB patient ತರ ಇದ್ದೀಯ” ಅಂದಿದ್ದಾರೆ. ಸದ್ಯ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು. ಇದು ಗಿಲ್ಲಿ ಫಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಟಿಬಿ ಜೊತೆ ಹೋರಾಡ್ತಾ ಇರುವ ಈ ದೇಶದ ಲಕ್ಷಾಂತರ ಜನರನ್ನ, ಅವರ ಕುಟುಂಬಗಳನ್ನ ಒಂದೇ ಸೆಂಟೆನ್ಸ್ನಲ್ಲಿ ನೀನು ಅವಮಾನ ಮಾಡಿದ್ದೀಯಾ ರಘು. ಇದು ಕೇವಲ ಬಿಗ್ ಬಾಸ್ ಮನೆ ಆಟ ಅಲ್ಲ.
ಗಿಲ್ಲಿ ಮೇಲಿನ ದ್ವೇಷ, ಅಷ್ಟೇ ಅಲ್ಲ, ಇಡೀ ಮಾನವೀಯತೆ ಮೇಲಿನ ದಾಳಿ. ಎಲ್ಲ ಟಿಬಿ ರೋಗಿಗಳು & ಅವರ ಕುಟುಂಬಕ್ಕೆ ಕ್ಷಮೆ ಕೇಳಬೇಕು. ಈ ರಘು ಇನ್ಯಾವ ಮುಖ ಇಟ್ಟು BBK12 ಮನೆಯಲ್ಲಿದ್ದಾನೋ? ಯಾವ ನೈತಿಕತೆ ಇದೆ ಇವನಿಗೆ? ಬಿಗ್ಬಾಸ್ ಶೋ ಬಿಡಿಸಿ, ಈತ ಮನುಷ್ಯ ಎನಿಸಿಕೊಳ್ಳಲು ಯೋಗ್ಯನಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೂಡಲೇ ಗಿಲ್ಲಿ ಮುಂದೆ ಕ್ಯಾಮೆರಾದಲ್ಲಿ ಕ್ಷಮೆ ಕೇಳಬೇಕು ಎಂದು ಗಿಲ್ಲಿ ಫಾನ್ಸ್ ಪಟ್ಟು ಹಿಡಿದಿದ್ದಾರೆ.
