Ashwaveega News 24×7 ಡಿಸೆಂಬರ್. 22: ಇದೇ ವರ್ಷ ಮೇ ತಿಂಗಳಲ್ಲಿ ನಡೆದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತದಂಥ ಯಾವುದೇ ಪ್ರಕರಣಗಳು ಮುಂದೆಂದೂ ಕ್ರೀಡಾಂಗಣದಲ್ಲಿ ಮರುಕಳಿಸದಿರಲಿ ಎಂದು ಡಿ. 22ರ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ- ಹವನ ನೆರವೇರಿಸಲಾಗಿದೆ.
6 ಜನ ಪುರೋಹಿತರು ಸುದರ್ಶನ ಹೋಮ, ನವಗ್ರಹ, ಗಣಪತಿ ಪೂಜೆ ನೆರವೇರಿಸಿದ್ದು, ಪೂಜೆಯಲ್ಲಿ ಕೆಎಸ್ ಸಿಎ ನೂತನ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ಹೌದು. . 18 ವರ್ಷಗಳ ನಂತರ ಆರ್ಸಿಬಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿತ್ತು. ಆದರೆ ಆ ಸಂಭ್ರಮ ಕೇವಲ 18 ಘಂಟೆಯೂ ಉಳಿಯಲಿಲ್ಲ. ಕರ್ನಾಟಕ ಸರ್ಕಾರ ಟ್ರೋಫಿಗೆ ಗೆದ್ದ ಆಟಗಾರರಿಗೆ ಸನ್ಮಾನ ಮಾಡಲು ಏರ್ಪಡಿಸಿದ್ದ ಕಾರ್ಯಕ್ರಮ ಏರ್ಪಡಿಸಿತ್ತು.
ಕಾರ್ಯಕ್ರಮ ಹಾಗೂ ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 11 ಆರ್ಸಿಬಿ ಫ್ಯಾನ್ಸ್ ದುರ್ಮರಣಕ್ಕೀಡಾಗಿದ್ದರು.
50ಕ್ಕೂ ಹೆಚ್ಚು ಫ್ಯಾನ್ಸ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಸಂಭ್ರಮಾಚರಣೆಯನ್ನು ರದ್ದುಗೊಳಿಸಿಲಾಗಿತ್ತು.
