Ashwaveega News 24×7 ಡಿಸೆಂಬರ್. 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಮೆಳೆಕೋಟೆಯಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೈಟ್ ತೆಗೆದುಕೊಳ್ಳಲು ಹಣ ಸಹಾಯ ಮಾಡ್ತೀನಿ ಅಂತ ಸ್ವಾಮಿಜಿ ಮಂಚಕ್ಕೆ ಕರೆದ ಆರೋಪ.. ಮಹಿಳೆಗೆ ಹಣ ಸಹಾಯ ಮಾಡುವುದಾಗಿ ಮಂಚಕ್ಕೆ ಕರೆದಿದ್ದಾನೆಂದು ಮಹಿಳೆ ದೂರು ನೀಡಿದ್ದಾಳೆ.
ರೂಂ ಗೆ ಬಂದರೆ ಹಣ ಕೊಡ್ತೀನಿ ಅಂತ ಪೋನ್ ನಲ್ಲಿ ಸ್ವಾಮಿಯ ಮಾತು. ಮೆಳೆಕೋಟೆಯ ಮಹರ್ಷಿ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದಗುರೂಜಿ ವಿರುದ್ದ ಆರೋಪ ಕೇಳಿ ಬಂದಿದೆ.
ಅಷ್ಟಕು ಈ ಸ್ವಾಮಿಜೀ ಮತ್ತು ಮಹಿಳೆಯ ಮಧ್ಯ ಏನ್ ನೆಡೆದಿದೆ ಅಂತ ನೋಡೋದಾದ್ರೆ.. ಸ್ವಾಮೀಜಿ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ಸೈಟ್ ಕೊಡಿಸುವ ಭರವಸೆ ನೀಡಿದ್ದರು. 13 ಲಕ್ಷ ರೂ. ಮೌಲ್ಯದ ಸೈಟ್ ಅನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8 ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು.
ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ.ಮಹಿಳೆ ಬಳಿಯಿದ್ದ 8 ಲಕ್ಷ ರೂ.ಗಳಲ್ಲಿ 5 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ಆಗಿ ಮತ್ತೊಬ್ಬರಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷವಾದರೂ ಸೈಟ್ ಕೊಡದ ಕಾರಣ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾರೆ.. ಆಗ ಸ್ವಾಮೀಜಿ ರೂಂಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು ಎಂದು ಹೇಳಿದ್ದಾರೆ..
ಜೊತೆಗೆ ಪ್ರತಿನಿತ್ಯ ಸ್ವಾಮಿ ಕರೆ ಮಾಡಿ ಕಿರುಕುಳ ನೀಡ್ತಿದ್ದ ಎಂದು ಆಕ್ರೋಶ ಹೊರಹಾಕಿದ್ದಾರೆ… ಹಲವು ಭಾರಿ ಆಡಿಯೋ ಕಾಲ್ ಮತ್ತು ವಿಡಿಯೋ ಕಾಲ್ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಬ್ರಹ್ಮಾನಂದಗುರೂಜಿ ಮಾತನಾಡಿರುವ ಆಡಿಯೋ ವಿಡಿಯೋ ಮಹಿಳೆಯು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ.
ಈ ವಿಷಯ ಗೊತ್ತಾಗಿ ಸ್ವಾಮಿಜಿ ಆಡಿಯೋ ವಿಡಿಯೋ ಡಿಲೀಟ್ ಮಾಡುವಂತೆ ಮಹಿಳೆಯೆ 50 ಸಾವಿರ ಹಣ ನೀಡುವುದಾಗಿ ಆಮೀಷ ಹೊಡಿದ್ದಾರೆ.. ಇದಲ್ಲದೆ ಮಹಿಳೆ ಒಬ್ಬೊಂಟಿಯಾಗಿ ಮನೆಯಲ್ಲಿದ್ದಾಗ ಸ್ವಾಮಿಜಿ ಮನೆಗೂ ಹೋಗಿ ಕಿರುಕುಳ ನೀಡಿದ್ದಾನೆಂದು ಅರೋಪಿಸದ್ದ ಮಹಿಳೆ , ಈ ವಿಚಾರವಾಗಿ ಮಹಿಳೆ ಪೊಲೀಸ್ ಠಾಣೆಗೆ ಆಡಿಯೋ, ವಿಡಿಯೋ ಸಮೇತ ಹೋಗಿ ದೂರು ನೀಡಿದ್ದಾರೆ.
ಅದರೆ ಪೊಲೀಸರಿಂದ ಯಾವುದೇ ನ್ಯಾಯ ಸಿಗ್ತಿಲ್ಲ ಅಂತ ಮಹಿಳೆಯ ಅಳಲು .. ನನಗೆ ಕಿರುಕುಳ ಕೊಟ್ಟು ನನ್ನ ವಿರುದ್ದವೇ ಬ್ರಹ್ಮಾನಂದ ಗುರೂಜಿ ಮತ್ತು ಪತ್ನಿ ನಿಂದನೆ ಆರೋಪ ಮಾಡ್ತಿದ್ದಾರೆ. ಆಡಿಯೋ – ವಿಡಿಯೋಗಳನ್ನ ತೋರಿಸಿ ನೊಂದ ಮಹಿಳೆ ನ್ಯಾಯಕ್ಕಾಗಿ ಒತ್ತಾಯ ಮಾಡ್ತಿದ್ದಾರೆ.
