Ashwaveega News 24×7 ಡಿಸೆಂಬರ್. 25: ರಾಜ್ಯಾದ್ಯಂತ ಇಂದು ಸಿನಿಮಾ ಸಂಭ್ರಮ ಬಹಳ ಜೋರಾಗಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ಮುಖ್ಯಭೂಮಿಕೆಯ 2025ರ ಬಹುನಿರೀಕ್ಷಿತ ಚಿತ್ರ ‘ಮಾರ್ಕ್’ ಫೈನಲಿ ಚಿತ್ರಮಂದಿರ ಪ್ರವೇಶಿಸಿದೆ. ಕೋಟ್ಯಂತರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಮುಂಜಾನೆಯೇ ಥಿಯೇಟರ್ ಬಳಿ ಸಂಭ್ರಮಾಚರಣೆ ಶುರುವಾಗಿತ್ತು.
ಕರ್ನಾಟಕದಲ್ಲಿ 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಬೆಂಗಳೂರಿನ ಸಂತೋಷ್ ಸೇರಿ ಹಲವು ಥಿಯೇಟರ್ಗಳಲ್ಲಿ ಬೆಳಗ್ಗೆ 6.30ಕ್ಕೆ ಶೋ ಆರಂಭಗೊಂಡಿದೆ. ಸುದೀಪ್ ಪುತ್ರಿ ಸಾನ್ವಿ ಹಾಗೂ ಪತ್ನಿ ಪ್ರಿಯಾ ಅವರು ಸಂತೋಷ್ ಚಿತ್ರಮಂದಿರದಲ್ಲಿ ಬೆಳಗ್ಗೆಯೇ ಅಭಿಮಾನಿಗಳ ಜೊತೆ ಕುಳಿತು ‘ಮಾರ್ಕ್’ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಸಿನಿಮಾದ ‘ಮಸ್ತ್ ಮಲೈಕಾ’ ಸಾಂಗ್ ಮೂಲಕ ಸುದೀಪ್ ಪುತ್ರಿ ಸಾನ್ವಿ ಅವರು ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.
ಸಿನಿಮಾದಲ್ಲಿ ಸುದೀಪ್ ಜೊತೆ ದೀಪ್ಶಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ, ಯೋಗಿ ಬಾಬು ಸೇರಿ ಹಲವರು ನಟಿಸಿದ್ದಾರೆ.
