Ashwaveega News 24×7- ಜನವರಿ 06 – Street Dogs Issues –ಬೆಳಗಾವಿ: ಬೆಳಗಾವಿಯಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 2 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಬಾಲಕಿಯ ಮುಖದ ಮೇಲೆ ತೀವ್ರ ಗಾಯಗಳಾಗಿವೆ.
ಹೌದು.. ಬೆಳಗಾವಿಯಲ್ಲಿ ಎರಡು ವರ್ಷದ ಬಾಲಕಿ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದ್ದು, ದಾಳಿಯಿಂದಾಗಿ ಬಾಲಕಿಯ ಮುಖಕ್ಕೆ ತೀವ್ರಗಾಯಗಳಾಗಿವೆ.
ಬೆಳಗಾವಿಯ ಮಾರುತಿ ನಗರದಲ್ಲಿ ಈ ಘಟನೆ ನಡೆದಿದ್ದು, ಬೀದಿ ನಾಯಿಯೊಂದು ಎರಡು ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದ ಪರಿಣಾಮ ಆಕೆಯ ಮುಖಕ್ಕೆ ತೀವ್ರ ಗಾಯಗಳಾಗಿವೆ. ಒಂದು ವರ್ಷ ಹತ್ತು ತಿಂಗಳ ವಯಸ್ಸಿನ ಆರಾಧ್ಯ ಉಮೇಶ್ ಟಾರ್ಗರ್ ಎಂಬ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ಆಕೆಯ ಮೇಲೆ ದಾಳಿ ಮಾಡಿತು.
ಈ ವೇಳೆ ಬಾಲಕಿಯ ಹಣೆ, ಕೆನ್ನೆ ಮತ್ತು ತುಟಿಗೆ ಕಚ್ಚಿದ್ದರಿಂದ ಬಾಯಿ ಗಲ್ಲದವರೆಗೆ ಹರಿದು ತೀವ್ರ ರಕ್ತಸ್ರಾವವಾಯಿತು. ಸ್ಥಳೀಯರು ಮತ್ತು ಮಗುವಿನ ತಾಯಿ ಆಕೆಯ ಸಹಾಯಕ್ಕೆ ಧಾವಿಸಿ ನಾಯಿಯನ್ನು ಓಡಿಸುವಲ್ಲಿ ಯಶಸ್ವಿಯಾದರು.
ಬಳಿಕ ಮಗು ಆರಾಧ್ಯಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬಕ್ಕೆ ವೈದ್ಯರು ಸಲಹೆ ನೀಡಿದರು.
