Ashwaveega News 24×7 ಜನವರಿ 10 – Gilli Nata – ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ . ಬಿಗ್ಬಾಸ್ ಮನೆಗೆ ಗಿಲ್ಲಿ ಪ್ರವೇಶಿಸಿದ ಸಮಯದಲ್ಲಿ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಕೇವಲ ಒಂದು ಲಕ್ಷವಾಗಿತ್ತು. ಆದರೆ ಈಗ ಗಿಲ್ಲಿಯ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಪಾಲೋವರ್ಸ್ ಸಂಖ್ಯೆ ಹತ್ತು ಲಕ್ಷದ ಗಡಿ ದಾಟಿದೆ.
ಫಿನಾಲೆ ಹತ್ತಿರವಾಗುತ್ತಿದ್ದಂತೆ ಗಿಲ್ಲಿ ಮೇಲಿನ ಅಭಿಮಾನಿಗಳ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಕ್ರೇಜ್ಗೆ ಸಾಕ್ಷಿಯಾಗಿ, ಅಭಿಮಾನಿಯೊಬ್ಬರು ಗಿಲ್ಲಿಯ ಮುಖದ ಟ್ಯಾಟೂವನ್ನ ಕೈಮೇಲೆ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗಿಲ್ಲಿ ಗೆಲ್ಲಬೇಕು ಅನ್ನೋ ಪೋಸ್ಟ್ಗಳು, ಸ್ಟೋರಿ ಹಾಗೂ ರೀಲ್ಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ತಮ್ಮ ಪ್ರೊಫೈಲ್ಗಳಲ್ಲಿ ಗಿಲ್ಲಿಯ ಪರವಾಗಿ ನಿರಂತರವಾಗಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇಡೀ ಕರುನಾಡಿನ ಮನ ಗೆದ್ದಿರೋ ಗಿಲ್ಲಿ, ಈ ಸಲ ಬಿಗ್ಬಾಸ್ ಟ್ರೋಫಿ ಎತ್ತುವ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ …
