Ashwaveega News 24×7 ಜನವರಿ 16 – ಬೆಂಗಳೂರು: ಬಿಗ್ಬಾಸ್ ಮನೆಗೆ ಪ್ರವೇಶಿಸಿರುವ ಗಿಲ್ಲಿಗೆ ಮತ್ತೊಂದು ಬೆಂಬಲ ಸಿಕ್ಕಿದೆ ಅಂತನೇ ಹೇಳಬಹುದು . ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ನಟ ಶಿವಣ್ಣ ತಮ್ಮ ಅಭಿಮಾನ ಮತ್ತು ಆಶೀರ್ವಾದವನ್ನು ವ್ಯಕ್ತಪಡಿಸಿದ್ದಾರೆ.
“ನ್ಯಾಚುರಲ್ ಆಗಿ ಆಟ ಆಡುವ ಗಿಲ್ಲಿ ನನಗೆ ತುಂಬಾ ಇಷ್ಟ. ಬಿಗ್ಬಾಸ್ ಅಲ್ಲಿ ಗಿಲ್ಲಿ ಅಂದ್ರೆ ತುಂಬಾ ಇಷ್ಟ. ಗಿಲ್ಲಿ ತುಂಬಾನೇ ಒಳ್ಳೆಯ ವ್ಯಕ್ತಿ, ಚೆನ್ನಾಗಿ ಆಡ್ತಾನೆ” ಅಂತ ಶಿವಣ್ಣ ಹೇಳಿದ್ದಾರೆ . ಅವರು ಗಿಲ್ಲಿಗೆ ತಮ್ಮ ಕೃಪಾಕಟಾಕ್ಷವನ್ನು ವ್ಯಕ್ತಪಡಿಸಿದ್ದು, “‘ಮಾತಿನ ಮಲ್ಲ’ ಗಿಲ್ಲಿಗೆ ‘ದೊಡ್ಮನೆ’ ಆಶೀರ್ವಾದ ಇದೆ . ಟೈಮ್ ಸಿಗೋದಿಲ್ಲ ಆದ್ರೂ ಅವನಿಗಾಗಿ ನೋಡ್ತೇನೆ . ಗಿಲ್ಲಿ ಒಳ್ಳೆಯ ನಟ, ಒಳ್ಳೆ ಡ್ಯಾನ್ಸರ್” ಅಂತ ಹೇಳಿದ್ದಾರೆ .
ಇದಲ್ಲದೆ, ಶಿವಣ್ಣ ಗಿಲ್ಲಿ ಸ್ಟೈಲ್ನಲ್ಲಿ ನೇರವಾಗಿ ವಿಶ್ ಮಾಡಿದ್ದಾರೆ, ಇದು ಅಭಿಮಾನಿಗಳಲ್ಲಿ ಹೆಚ್ಚುವರಿ ಉತ್ಸಾಹವನ್ನು ಹುಟ್ಟಿಸಿದೆ. ಈ ಬೆಂಬಲ ಗಿಲ್ಲಿಗೆ ಫೈನಲ್ ಹಂತದಲ್ಲಿ ಒಳ್ಳೆಯ ಪ್ರೇರಣೆಯಾಗಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ .
ಬಿಗ್ಬಾಸ್ ಹೌಸ್ನಲ್ಲಿ ಗಿಲ್ಲಿ ಪ್ರದರ್ಶಿಸುತ್ತಿರುವ ನೈಜ ವ್ಯಕ್ತಿತ್ವ, ಆಟದ ಕೌಶಲ್ಯ ಮತ್ತು ನೈಜ ಶೈಲಿ, ಈ ಬಾರಿಗೆ ವಿನ್ನರ್ ಪಟ್ಟದಲ್ಲಿಯೂ ಭರ್ಜರಿ ಸ್ಪರ್ಧೆಗೆ ಕಾರಣವಾಗಿದೆ.
