Ashwaveega News 24×7 ನವೆಂಬರ್. 18: ಬೆಳಗಾವಿಯ ಭೂತರಾಮನಹಟ್ಟಿ ಬಳಿಯಿರುವ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಈ ಸರಣಿ ಸಾವಿಗೆ ಬ್ಯಾಕ್ಟೀರಿಯಾ ಸೋಂಕು ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಇಲ್ಲಿಯವರೆಗೂ 31 ಕೃಷ್ಣ ಮೃಗ ಸಾವನ್ನಪಿವೆ ಎಂದ ವರದಿಯಾಗಿದೆ.
ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಭಾನುವಾರ ಭೇಟಿ ನೀಡಿದ ತಜ್ಞರ ತಂಡವು ಸಾವನ್ನಪ್ಪಿರುವ ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿತು. ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನೀಲ್ ಪನ್ವಾರ್ ನೇತೃತ್ವದಲ್ಲಿಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಬೆಂಗಳೂರು ಶಾಖೆಯ ತಜ್ಞ ಡಾ. ಚಂದ್ರಶೇಖರ ಎನ್., ಬನ್ನೇರುಘಟ್ಟ ಶಾಖೆ ತಜ್ಞ ಡಾ. ಮಂಜುನಾಥ ವಿ. ಅವರನ್ನೊಳಗೊಂಡ ತಂಡ ಭಾನುವಾರ ಬೆಳಗ್ಗೆ ಮೃಗಾಲಯಕ್ಕೆ ಭೇಟಿ ನೀಡಿತು.
ಇನ್ನು ಕಿರು ಮೃಗಾಲಯದಲ್ಲಿ ಉಳಿದಿರುವ 7 ಕೃಷ್ಣ ಮೃಗಗಳನ್ನುಉಳಿಸಿಕೊಳ್ಳಲು ವೈದ್ಯರ ತಂಡ ಹರಸಾಹಸ ಪಡುತ್ತಿದೆ. ಜೊತೆಗೆ ಉಳಿದಿರುವ ಕೃಷ್ಣಮೃಗಗಳಿಗೆ ಆಂಟಿ ಬಯೋಟೆಕ್ ಚಿಕಿತ್ಸೆ ಕೂಡಾ ನೀಡುತ್ತಿದ್ದಾರೆ.
ಕೃಷ್ಣಮೃಗಗಳು ಮೃತಪಟ್ಟ ಪ್ರದೇಶವನ್ನು ಮೃಗಾಲಯದ ಸಿಬ್ಬಂದಿ ನಿರ್ಬಂಧಿಸಿದ್ದಾರೆ. ಸೋಂಕು ಹರಡದಂತೆ ಮೃಗಾಲಯದ ಸಿಬ್ಬಂದಿ ಮುಂಜಾಗ್ರತೆ ಕ್ರಮಕೈಗೊಂಡಿದ್ದು, ಗ್ರೀನ್ ಮ್ಯಾಟ್ ಕಟ್ಟಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧಿಸಿದ್ದಾರೆ.
