Ashwaveega News 24×7 ಫೆಬ್ರವರಿ 18 -2026 : ವಿಶ್ವ ಆರ್ಥಿಕತೆಯ ಕುರಿತು ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿರುವ ಖ್ಯಾತ ಹೂಡಿಕೆದಾರ ಹಾಗೂ ರಿಚ್ ಡ್ಯಾಡ್ ಸರಣಿ ಪುಸ್ತಕಗಳ ಲೇಖಕ Robert Kiyosaki, ಅತಿದೊಡ್ಡ ಸ್ಟಾಕ್ ಮಾರ್ಕೆಟ್ ಕ್ರ್ಯಾಶ್ ಸಮೀಪದಲ್ಲೇ ಇದೆ ಎಂದು ಹೇಳಿದ್ದಾರೆ.
2013ರಲ್ಲಿ ಪ್ರಕಟಿಸಿದ ತನ್ನ ಪುಸ್ತಕ Rich Dad’s Prophecy ಯಲ್ಲಿ ಭಾರೀ ಮಾರುಕಟ್ಟೆ ಕುಸಿತದ ಬಗ್ಗೆ ಮುನ್ಸೂಚನೆ ನೀಡಿದ್ದ ಕಿಯಾಸಕಿ, ಇದೀಗ ಆ ಎಚ್ಚರಿಕೆ ನಿಜವಾಗುವ ಸಮಯ ಬಂದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಕಂಡೂ ಕೇಳರಿಯದ ಅತೀ ದೊಡ್ಡ ಕ್ರ್ಯಾಶ್ಗೆ ಸಿದ್ಧರಾಗಿ ಎಂದು ಅವರು ಹೂಡಿಕೆದಾರರಿಗೆ ಓಪನ್ ವಾರ್ನಿಂಗ್ ನೀಡಿದ್ದಾರೆ.
ಆರ್ಥಿಕ ಬಿಕ್ಕಟ್ಟು ಯಾವಾಗಲೂ ನಷ್ಟಗಳ ಜೊತೆಗೆ ಹೊಸ ಅವಕಾಶಗಳನ್ನೂ ತರುತ್ತದೆ ಎಂದು ಹೇಳಿದ ಕಿಯಾಸಕಿ, “ಭಯಪಡುವವರು ನಷ್ಟದಲ್ಲಿ ಹೋಗುತ್ತಾರೆ. ಆದರೆ ಆರ್ಥಿಕ ಜ್ಞಾನ ಹೊಂದಿ, ದೀರ್ಘಕಾಲಿಕ ದೃಷ್ಟಿಯಿಂದ ಹೂಡಿಕೆ ಮಾಡುವವರು ತಪ್ಪದೆ ಸಿರಿವಂತರಾಗುತ್ತಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಜನರು ಸ್ಟಾಕ್ಸ್ ಮಾರಾಟಕ್ಕೆ ಮುಂದಾಗುತ್ತಾರೆ. ಆದರೆ ಆ ಸಮಯದಲ್ಲಿ ಖರೀದಿ ಮಾಡುವವರೇ ಮುಂದಿನ ದಿನಗಳಲ್ಲಿ ಧನವಂತರಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ . ಚಿನ್ನ, ಬೆಳ್ಳಿ ಹಾಗೂ ಬಿಟ್ಕಾಯಿನ್ ಮುಂತಾದ ಪರ್ಯಾಯ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಆಯ್ಕೆಯಾಗಬಹುದು ಎಂದು ಕಿಯಾಸಕಿ ಸೂಚಿಸಿದ್ದಾರೆ.
ಜಾಗತಿಕ ಹೂಡಿಕೆದಾರ ವಲಯದಲ್ಲಿ ಈ ಹೇಳಿಕೆಗಳು ಹೊಸ ಚರ್ಚೆ ಹುಟ್ಟಿಕೊಂಡಿದೆ . ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗುವ ಸಾಧ್ಯತೆ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ. ಹೂಡಿಕೆದಾರರು ಎಚ್ಚರಿಕೆಯಿಂದ, ಜ್ಞಾನಾಧಾರಿತ ನಿರ್ಧಾರ ಕೈಗೊಳ್ಳಬೇಕೆಂಬ ಸಂದೇಶವೇ ಕಿಯಾಸಕಿ ಹೇಳಿ ಎಚ್ಚರಿಸಿದ್ದಾರೆ …
