Ashwaveega News 24×7 ಫೆಬ್ರವರಿ 2026 – ನವದೆಹಲಿ : ಚಿನ್ನದ ಮಾರುಕಟ್ಟೆಯಲ್ಲಿ ಇಂದು ಭಾರೀ ಆಘಾತ ಎದುರಾಗಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆ ಸುಮಾರು 10 ಸಾವಿರ ರೂಪಾಯಿ ಕುಸಿತ ಕಂಡಿದೆ . ಇದರಿಂದ 10 ಗ್ರಾಂ ಶುದ್ಧ ಚಿನ್ನದ ಬೆಲೆ 1.55 ಲಕ್ಷ ರೂಪಾಯಿಗೆ ಇಳಿಕೆ ಆಗಿದ್ದು, ಹೂಡಿಕೆದಾರರು ಮತ್ತು ಖರೀದಿದಾರರಿಗೆ ಶಾಕ್ ನೀಡಿದೆ.
ವಿಶೇಷವಾಗಿ ಇತ್ತೀಚೆಗೆ ಶುದ್ಧ ಚಿನ್ನ ಖರೀದಿ ಮಾಡಿದ್ದವರಿಗೆ ಇದು ದೊಡ್ಡ ಹೊಡೆತವಾಗಿದೆ. ಮಾರುಕಟ್ಟೆ ವಲಯದ ಮಾಹಿತಿ ಪ್ರಕಾರ, ಸಂಜೆ ವೇಳೆಗೆ ಇನ್ನಷ್ಟು ಕುಸಿತ ಸಂಭವಿಸುವ ಸಾಧ್ಯತೆ ಇದೆ. ಇದೇ ಟ್ರೆಂಡ್ ಮುಂದುವರೆದರೆ, ಈ ವಾರದೊಳಗೆ ಚಿನ್ನದ ಬೆಲೆ ಲಕ್ಷ ರೂಪಾಯಿಗಿಂತ ಕೆಳಗೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೀಗಾಗಿ, ಚಿನ್ನದ ಮಾರುಕಟ್ಟೆ ಮೇಲೆ ಹೂಡಿಕೆದಾರರು ನಿಜಕ್ಕೂ ಎಚ್ಚರಿಕೆಯಿಂದ ಗಮನಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
