
ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿದ್ದು ಕಾಂಗ್ರೆಸ್ ಪಡೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರ ಅವಶ್ಯಕತೆಯಿದೆ. ಫೀಲ್ಡ್ಗೆ ಹೋಗಿ ಕೆಲಸ ಮಾಡುವವರಿಗೆ ನಮ್ಮ ಬೆಂಬಲ ಇರುತ್ತೆ.ಕೆಲಸ ಬಿಟ್ಟು ಗಿರಿಗಿಟ್ಲೆ ಹೊಡೆಯುವವರಿಗೆ ಯಾವುದೇ ಸ್ಥಾನಮಾನ ಸಿಗಲ್ಲ ಎಂದು ಡಿಕೆಶಿ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ಪದಾಧಿಕಾರಿಗಳ ಲಿಸ್ಟ್ ಫೈನಲ್ ಆಗಿದೆ. ಯಾರು ಪಕ್ಷ ಸಂಘಟನೆ ಮಾಡುತ್ತಾರೆ, ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ ಅಂಥವರಿಗೆ ಮೊದಲ ಆದ್ಯತೆ ನೀಡಲಾಗುವುದು. ಈ ಮಧ್ಯೆ ಎಐಸಿಸಿ ಅಧ್ಯಕ್ಷರು ಕೂಡ ಸ್ಪಷ್ಟ ಸಂದೇಶ ನೀಡಿದ್ದು ಮಂತ್ರಿಗಳ ಪ್ರಭಾವ ಅಥವಾ ಇತರರಿಂದ ಪ್ರಭಾವ ಬೀರುವವರನ್ನು ಪರಿಗಣಿಸಲಾಗುವುದಿಲ್ಲ ಎಂದು ಡಿಸಿಎಂ ಹೇಳಿದ್ದಾರೆ.

ಅಭಿಷೇಕ್.ಎಸ್