Ashwaveega News 24×7 ಫೆಬ್ರವರಿ 26 – 2026 ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ Darshan Thoogudeepa ಅವರಿಗೆ ಕೋರ್ಟ್ನಲ್ಲಿ ಮತ್ತೊಂದು ಸವಾಲು ಎದುರಾಗಿದೆ. ಪ್ರಕರಣದಲ್ಲಿ ಪ್ರತಿದಿನ ಟ್ರಯಲ್ ನಡೆಸುವ ವಿಚಾರಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) Prasanna Kumar ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕರಣವನ್ನು ಪ್ರತಿದಿನ ವಿಚಾರಣೆ ನಡೆಸಬೇಕೆಂಬ ಮನವಿಯನ್ನು ದರ್ಶನ್ ಪರ ವಕೀಲರು ಸಲ್ಲಿಸಿದ್ದರೆ, ಇದಕ್ಕೆ ವಿರೋಧವಾಗಿ SPP 57ನೇ ಸಿಸಿಹೆಚ್ ಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ನ 309ನೇ ಸೆಕ್ಷನ್ ಅಡಿಯಲ್ಲಿ ಸಾಧ್ಯವಾದಷ್ಟು ಬೇಗ ವಿಚಾರಣೆ ಪೂರ್ಣಗೊಳಿಸಲು ದರ್ಶನ್ ಮನವಿ ಮಾಡಿದ್ದರು .
ಈ ಹಿಂದೆ ಇದೇ ವಿಚಾರವನ್ನು ಉಲ್ಲೇಖಿಸಿ Supreme Court of India ಕೂಡ ಪ್ರಶ್ನೆ ಎತ್ತಿತ್ತು. “ಜೈಲಿನಲ್ಲಿ ಸಾವಿರಾರು ವಿಚಾರಣಾಧೀನ ಕೈದಿಗಳು ಇದ್ದಾರೆ. ಈ ಪ್ರಕರಣದಲ್ಲೇ ಯಾಕೆ ಪ್ರತಿದಿನ ಟ್ರಯಲ್ ?” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಿನ್ನೆಲೆ, ಅದನ್ನೇ ಆಧಾರವಾಗಿಟ್ಟುಕೊಂಡು SPP ಕೋರ್ಟ್ಗೆ ಮೊರೆ ಹೋಗಿದ್ದಾರೆ.
ಇನ್ನೊಂದೆಡೆ, ಕಳೆದ ಏಳೆಂಟು ತಿಂಗಳಿಂದ ಜೈಲಿನಲ್ಲಿ ಇರುವ ದರ್ಶನ್ ಪರ ವಕೀಲರು, ವಿಚಾರಣೆಯನ್ನು ವಿಳಂಬ ಮಾಡದೆ ಆದಷ್ಟು ಬೇಗ ಮುಗಿಸಲು ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಪೋಷಕರ ವಿಚಾರಣೆಗೆ ಈಗಾಗಲೇ 30 ದಿನಗಳಾದರೂ, ಇನ್ನೂ ನೂರಾರು ಸಾಕ್ಷಿಗಳು ಬಾಕಿ ಇವೆ .
ಈ ಅರ್ಜಿಯ ವಿಚಾರಣೆಯನ್ನು ಸೋಮವಾರ 57ನೇ ಸಿಸಿಹೆಚ್ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಪ್ರಕರಣದ ಮುಂದಿನ ಹಂತದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ .
