Ashwaveega News 24×7 ಡಿಸೆಂಬರ್. 02: ಡಾ.ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಫೋಟೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.. ಹೌದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ಇರೋ ಈ ಫೊಟೋ ಎಲ್ಲರ ಗಮನ ಸೆಳೆಯುತ್ತಿದ್ದು ಕೂತುಹಲ ಮೂಡಿಸುತ್ತಿದೆ..
ಎಸ್ ಬಾಲಿವುಡ್ ನಟ ಕಿಂಗ್ ಖಾನ್ ಮಗ ಆರ್ಯನ್ ಖಾನ್ನನ್ನು ಧನ್ಯಾ ರಾಮ್ ಕುಮಾರ್ ಮೀಟ್ ಮಾಡಿರುವುದು ಎಲ್ಲಾರಿಗೂ ಕುತುಹಲ ಮೂಡಿದೆ.. ರಾಜ್ಕುಮಾರ್ ಮೊಮ್ಮಗಳು ಕನ್ನಡ ಸಿನಿಮಾದಲ್ಲಿಯೇ ಗುರುತಿಸಿಕೊಂಡಿದ್ದಾರೆ.
ಆರ್ಯನ್ ಖಾನ್ ಬಾಲಿವುಡ್ ಅಲ್ಲಿಯೇ ಹೆಸರು ಮಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದ ಕಡೆಗೆ ಹಾದಿಯೂ ಇಲ್ಲ. ಹಾಗಾಗಿಯೇ ಈ ಯುವ ತಾರೆಯರ ಫೋಟೋ ಹೆಚ್ಚು ಗಮನ ಸೆಳೆಯುತ್ತಿದೆ.
ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದರೋ? ಅಥವಾ ಧನ್ಯಾ ರಾಮ್ಕುಮಾ್ ಮುಂಬೈಗೆ ಹೋಗಿದ್ದರು? ಈ ಒಂದು ಪ್ರಶ್ನೆ ಎಲ್ಲಾರಿಗೂ ಮುಡುತ್ತದೆ.
ಶಾರುಖ್ ಖಾನ್ ಮಗನಿಗೂ ಧನ್ಯಾ ರಾಮ್ ಅವರಿಗೂ ಎಲ್ಲೂ ಕನೆಕ್ಷನ್ ಇಲ್ವೇ ಇಲ್ಲ. ಬಾಲಿವುಡ್ಗೆ ಹೋಗುವ ಪ್ಲಾನ್ ಅನ್ನೂ ಧನ್ಯ ರಾಮ್ ಮಾಡಿದಂತೆ ಇಲ್ಲ. ಆರ್ಯನ್ ಖಾನ್ ಕನ್ನಡಕ್ಕೆ ಬರೋ ಯೋಚನೆ ಕೂಡ ಮಾಡಿದಂತೆ ಇಲ್ವೇ ಇಲ್ಲ.
ಆದರೂ ಹೇಗೆ ಇವರ ಭೇಟಿ ಹೆಚ್ಚು ಕುತೂಹಲ ಮೂಡಿಸಿದೆ..
ಇತ್ತೀಚಿಗೆ ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದರು. ಹಾಗೆ ಬಂದಾಗಲೇ ಧನ್ಯರಾಮ್ ಮೀಟ್ ಆಗಿದ್ದಾರೆ. ಮೀಟ್ ಅಷ್ಟೇ ಅಲ್ಲ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಆ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
