Ashwaveega News 24×7 ಫೆಬ್ರವರಿ 24 – 2026 : ತೆಲಂಗಾಣದಲ್ಲಿ ಅಪರೂಪದ ಡಬಲ್ ಮದುವೆ ಎಲ್ಲರ ಗಮನ ಸೆಳೆದಿದೆ. Kamareddy ಜಿಲ್ಲೆಯಲ್ಲಿ ಅವಳಿ ಸಹೋದರರು ಮತ್ತು ಅವಳಿ ಸಹೋದರಿಯರ ಮದುವೆ ನೆರವೇರಿದ್ದು, ಮದುವೆ ಸಮಾರಂಭವೇ ಕುತೂಹಲದ ಕೇಂದ್ರವಾಗಿತ್ತು.
ಅವಳಿ ಸಹೋದರರಾದ ವಿಜಯ್ ಮತ್ತು ವಿನಯ್ ಅವರು, ಅವಳಿ ಸಹೋದರಿಯರಾದ ಕೀರ್ತನಾ ಮತ್ತು ಕೀರ್ತಿ ಅವರನ್ನು ವರಿಸಿದರು. ವಿಶೇಷ ಅಂದರೆ, ಎರಡೂ ಜೋಡಿಗಳು ನೋಡಲು ಒಂದೇ ರೀತಿ ಕಾಣಿಸಿಕೊಂಡರು. ಮದುವೆ ವೇದಿಕೆಯಲ್ಲಿ ನಿಂತ ನಾಲ್ವರನ್ನು ನೋಡಿ ಅತಿಥಿಗಳು ಕ್ಷಣಕಾಲ ಗೊಂದಲಕ್ಕೀಡಾದರು.
“ಯಾರು ಯಾರ ಗಂಡ ? ಯಾರು ಯಾರ ಹೆಂಡ್ತಿ?” ಎಂಬ ಪ್ರಶ್ನೆ ಅಲ್ಲಿ ಹಾಜರಿದ್ದ ಅತಿಥಿಗಳಲ್ಲಿ ಹರಿದಾಡಿತು. ಕೆಲವರು ತಪ್ಪಾಗಿ ಬೇರೆ ಜೋಡಿಗೆ ಶುಭಾಶಯ ಹೇಳಿದ ಘಟನೆಗಳೂ ನಡೆದವು .
ಆದರೆ, ವಧು-ವರರು ಮತ್ತು ಕುಟುಂಬಸ್ಥರಿಗೆ ಮಾತ್ರ ಎಲ್ಲವೂ ಸ್ಪಷ್ಟವಾಗಿತ್ತು. ಜೋಡಿಗಳ ಬಗ್ಗೆ ಅವರಿಗೆ ಪೂರ್ಣ ತಿಳುವಳಿಕೆ ಇದ್ದುದರಿಂದ ಮದುವೆ ಶಾಸ್ತ್ರಗಳು ಸುಗಮವಾಗಿ ನೆರವೇರಿದವು.
ಈ ಅಪರೂಪದ ಮದುವೆಯನ್ನು ನೋಡಲು ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು . ಒಂದೇ ದಿನ, ಒಂದೇ ವೇದಿಕೆಯಲ್ಲಿ, ಅವಳಿ ಸಹೋದರರು ಮತ್ತು ಅವಳಿ ಸಹೋದರಿಯರ ಮದುವೆ ನಡೆಯುವುದು ವಿರಳ ದೃಶ್ಯ …
